ಮೂಡುಬಿದಿರೆ : ರೋಟರಿ ಪಿಯು ಕಾಲೇಜಿಗೆ ಶೇ.100 ಫಲಿತಾಂಶ
ಮೂಡಬಿದ್ರೆ ರೋಟರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗ ಹಾಗೂ ವಾಣಿಜ್ಯ ವಿಭಾಗದಲ್ಲಿ ಹಾಜಾರಾದ ಒಟ್ಟು 57 ವಿದ್ಯಾರ್ಥಿಗಳಲ್ಲಿ 57 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.100 ಫಲಿತಾಂಶ ದಾಖಲಿಸಿದೆ. ಈ ಪೈಕಿ 13 ಮಂದಿ ಡಿಸ್ಟಿಂಕ್ಷನ್, 33 ಮಂದಿ ಪ್ರಥಮ ದರ್ಜೆ, 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆ,ಓರ್ವ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಕುಮಾರಿ ಜೆವಿಶಾ ಸ್ವೀಟಿ ಫೆರ್ನಾಂಡಿಸ್ 579 ಅಂಕಗಳನ್ನು (ಶೇ. 96.5%), ಸಮರ್ಥ್ ಶೆಟ್ಟಿ 572 (ಶೇ. 96) , ವಾಣಿಜ್ಯ ವಿಭಾಗದಲ್ಲಿ ಕು. ಖ. ಜೆಸ್ಸಿ ಜೆನೆಟ್ 577(ಶೇ. 96.06), ಸಿಮ್ರಾನ್ ಜೆಮೀಮ ಸೈಯದ್ 567(ಶೇ. 94.05) ಅಂಕಗಳನ್ನು ಪಡೆದಿದ್ದಾರೆ.
Next Story