ಬೆಂಗಳೂರು: ಮೇ 18ರಿಂದ ಅನಿಮೇಶನ್ ಪ್ರದರ್ಶನ
ಬೆಂಗಳೂರು, ಎ.30: ಅಭಯ್ ಅನಿಮೇಷನ್ ಇಂಡಸ್ಟ್ರಿ ಹಾಗೂ ಸರಕಾರದ ಸಂಯುಕ್ತಾಶ್ರಯದಲ್ಲಿ ಮೇ 18ರಂದು ಭಾರತದ ಅತಿದೊಡ್ಡ ಅನಿಮೇಷನ್ ಹಾಗೂ ವಿಶುವಲ್ ಎಫೆಕ್ಟ್ ಗೇಮಿಂಗ್ ಪ್ರದರ್ಶನವನ್ನು ನಗರದ ಹೊಟೇಲ್ ಲಲಿತ್ ಅಶೋಕ್‌ನಲ್ಲಿ ಆಯೋಜಿಸಿದೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಎಎಫ್‌ಎಕ್ಸ್ ಕಾರ್ಯದರ್ಶಿ ಬಿ.ಎಸ್.ಶ್ರೀನಿವಾಸ್, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಕಂಪನಿಗಳು ಉದ್ಯಮಗಳ ನಡುವೆ ಸಹಭಾಗಿತ್ವ ಹೊಂದುವ ಉದ್ದೇಶದಿಂದ ಈ ಪ್ರದರ್ಶನ ಏರ್ಪಡಿಸಲಾಗಿದೆ. ಪ್ರದರ್ಶನದಲ್ಲಿ ಲೂಕ್ ಗ್ರೂವ್ ಪ್ರಸಾದ್, ಸುತ್ತೂರು ಸುರೇಶ್ ಸೇರಿದಂತೆ ಅನಿಮೇಶನ್ ಕ್ಷೇತ್ರದ ಗಣ್ಯರು ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ರಾಜ್ಯದ ಅಭಯ್ ಕಂಪೆನಿ ರೂಪಿಸಿರುವ 2.0 ಡಿಜಿಟಲ್ ಯೋಜನೆ ಕ್ರಿಯೇಟಿವ್ ಉದ್ಯಮದ ಬೆಳವಣಿಗೆಗೆ ಸಹಕಾರಿಯಾಗಿದೆ. ಕರ್ನಾಟಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿನ ಸೃಜನಾತ್ಮಕ ಹಾಗೂ ತಂತ್ರಜ್ಞಾನ ಸಮುದಾಯವನ್ನು ಒಂದೆಡೆ ಸೇರಿಸಿ ಉದ್ಯಮ ಪ್ರಗತಿಗೆ ಪೂರಕ ವಾತಾವರಣ ರೂಪಿಸುವುದು ಇಎಎಫ್‌ಎಕ್ಸ್‌ನ ಉದ್ದೇಶವಾಗಿದೆ ಎಂದರು.
ಕರ್ನಾಟಕ ಸರಕಾರ ಉದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶೈಕ್ಷಣಿಕ ಸಂಸ್ಥೆಗಳ ಐಪಿ ಡೆವಲಪರ್ ಮತ್ತು ಎವಿಜಿಸಿ ಸೇವೆಗಳನ್ನು ಒದಗಿಸುತ್ತಿರುವ ಡಿಜಿಟಲ್ ಸಂಸ್ಥೆಗಳು ಮತ್ತು ಡಿಜಿಟಲ್ ಮೀಡಿಯಾ ಉತ್ಪಾದನಾ ಕ್ಷೇತ್ರಗಳಲ್ಲಿ ಇಕೋ ಸಿಸ್ಟ್‌ಂ ಅನ್ನು ಅನುಷ್ಠಾನಕ್ಕೆ ತರುವ ಉದ್ದೇಶ ಹೊಂದಿರುವುದಾಗಿ ಅವರು ತಿಳಿಸಿದರು.







