Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಉದ್ಯಮಿಗಳಿಂದ ದತ್ತು ಸ್ವೀಕರಿಸಲ್ಪಟ್ಟ...

ಉದ್ಯಮಿಗಳಿಂದ ದತ್ತು ಸ್ವೀಕರಿಸಲ್ಪಟ್ಟ ಕೆಂಪುಕೋಟೆಯೆಂಬ ಅನಾಥ ಮಗು

ವಾರ್ತಾಭಾರತಿವಾರ್ತಾಭಾರತಿ1 May 2018 12:14 AM IST
share
ಉದ್ಯಮಿಗಳಿಂದ ದತ್ತು ಸ್ವೀಕರಿಸಲ್ಪಟ್ಟ ಕೆಂಪುಕೋಟೆಯೆಂಬ ಅನಾಥ ಮಗು

ಅನಾಥ ಮಕ್ಕಳನ್ನಷ್ಟೇ ದತ್ತು ನೀಡಲಾಗುತ್ತದೆ. ಕಸದ ತೊಟ್ಟಿಯಲ್ಲಿ, ಬೀದಿಯಲ್ಲಿದ್ದ ಮಕ್ಕಳನ್ನು ರಕ್ಷಿಸಿ ಬಳಿಕ ಅಗತ್ಯವಿರುವವರಿಗೆ ನೀಡಿ ಇಬ್ಬರ ಬದುಕನ್ನು ಸುಂದರಗೊಳಿಸುವುದು ದತ್ತು ಕೊಡುವ ಮುಖ್ಯ ಉದ್ದೇಶ. ಯಾವ ಪಾಲಕರೂ ತಮ್ಮ ಸ್ವಂತ ಮಕ್ಕಳನ್ನು ಇನ್ನೊಬ್ಬರಿಗೆ ದತ್ತು ನೀಡುವುದಿಲ್ಲ. ಅದೆಷ್ಟೇ ಬಡತನವಿದ್ದರೂ ಆ ಮಕ್ಕಳನ್ನು ಸಾಕಿ ಬೆಳೆಸುವ ಸುಖದಿಂದ ಅವರು ವಂಚಿತರಾಗಲು ಸಿದ್ಧರಿರುವುದಿಲ್ಲ. ತೀರಾ ಬಡವರು ಕೆಲವೊಮ್ಮೆ, ತಮ್ಮ ಮಗುವಾದರೂ ಸುಖವಾಗಿರಲಿ ಎಂಬ ಆಸೆಯಿಂದ ಮಕ್ಕಳನ್ನು ಶ್ರೀಮಂತರಿಗೆ ಮಾರುವುದಿದೆ. ಆದರೆ ಅದಕ್ಕೂ ಕಾನೂನು ಅವಕಾಶ ನೀಡುವುದಿಲ್ಲ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಯಾರಾದರೂ ಆ ರೀತಿಯಲ್ಲಿ ತಮ್ಮ ಮಕ್ಕಳನ್ನು ಶ್ರೀಮಂತರಿಗೆ ದತ್ತು ನೀಡಿದರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ದುರದೃಷ್ಟವಶಾತ್ ಇಂದು ಮಕ್ಕಳನ್ನಷ್ಟೇ ಅಲ್ಲ, ನಮ್ಮ ನೆಲ, ಜಲ, ಕಾಡು ಎಲ್ಲವನ್ನು ದತ್ತು ನೀಡುವ ಹೆಸರಿನಲ್ಲಿ ಸರಕಾರ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದೆ.

ಅರಣ್ಯದಲ್ಲಿ ತಲೆ ತಲಾಂತರಗಳಿಂದ ಬದುಕುತ್ತಿದ್ದ ಆದಿವಾಸಿಗಳನ್ನು ಎತ್ತಂಗಡಿ ಮಾಡಿ, ಅದನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಮಾಡಿದೆ. ಬೃಹತ್ ಉದ್ಯಮಿಗಳಿಗೆ ರೆಸಾರ್ಟ್ ಗಳನ್ನು ನಿರ್ಮಾಣ ಮಾಡಲು ಅವಕಾಶ ನೀಡುತ್ತಿದೆ. ಒಂದು ಕಾಲದಲ್ಲಿ ಸಾರ್ವಜನಿಕ ಸೊತ್ತು ಎಂದು ದೇಶದ ಎಲ್ಲ ಜನರು ಅಭಿಮಾನ ಪಡಬಹುದಾದ ನಮ್ಮ ನೆಲ, ಜಲಗಳ ಮೇಲೆ ಉದ್ಯಮಿಗಳು ಹಕ್ಕು ಸಾಧಿಸುತ್ತಿದ್ದಾರೆ. ಸಾಂಪ್ರದಾಯಿಕ ಮೀನುಗಾರಿಕೆಯ ಮೂಲಕ ಕಡಲನ್ನು ಕಾಯುತ್ತಿದ್ದ ಮೊಗವೀರರ ಜಾಗವನ್ನೂ ಉದ್ಯಮಿಗಳು ಆಕ್ರಮಿಸಿಕೊಂಡಿದ್ದಾರೆ. ಅವರ ಪಾಲಿಗೆ ಕಡಲೆನ್ನುವುದು ಚಿನ್ನದ ಮೊಟ್ಟೆಯಿಡುವ ಕೋಳಿ. ಆಳ ಸಮುದ್ರದ ಮೀನುಗಾರಿಕೆಯ ಮೂಲಕ ಸಣ್ಣ ಪುಟ ಮೀನುಗಳನ್ನೂ ಬಿಡದೇ ಅವರು ಗೋರಿಕೊಳ್ಳುತ್ತಿದ್ದಾರೆ. ಹೇಗೆ ಬೋರ್‌ವೆಲ್‌ಗಳ ಹೆಚ್ಚಳದಿಂದ ಅಂತರ್ಜಲ ಬತ್ತತೊಡಗಿದೆಯೋ ಅದೇ ರೀತಿ, ಈ ಆಳ ಸಮುದ್ರದ ಮೀನುಗಾರಿಕೆಯಿಂದಾಗಿ ಮೀನಿನ ಸಂಖ್ಯೆ ಇಳಿಮುಖವಾಗುತ್ತಿದೆ. ಇದರ ಜೊತೆಗೆ ಕಡಲ ತಡಿಯಲ್ಲಿ ಬದುಕುತ್ತಿದ್ದವರನ್ನೆಲ್ಲ ಒದ್ದೋಡಿಸಿ, ಅಲ್ಲಿ ಬೃಹತ್ ರೆಸಾರ್ಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಪ್ರಾಕೃತಿಕ ಸಂಪತ್ತು ವಿವಿಧ ಮುಖವಾಡಗಳಲ್ಲಿ ಬೃಹತ್ ಉದ್ಯಮಿಗಳ ಪಾಲಾಗುತ್ತಿವೆ. ಜನರು ಕಡಲು, ನದಿ, ಕಾಡುಗಳ ಬಳಿ ಸುಳಿಯಬೇಕಾದರೆ ಈ ಉದ್ಯಮಿಗಳ ಅನುಮತಿಯನ್ನು ಪಡೆಯಬೇಕಾದಂತಹ ವಾತಾವರಣ ನಿರ್ಮಾಣವಾಗಿದೆ. ಇವೆಲ್ಲವುಗಳ ಜೊತೆಗೆ ಸಾರ್ವಜನಿಕ ಉದ್ದಿಮೆಗಳನ್ನು ಹಂತ ಹಂತವಾಗಿ ಸರಕಾರ ಖಾಸಗಿಯವರಿಗೆ ಒಪ್ಪಿಸುತ್ತಿದೆ. ರೈಲ್ವೇ ಇಲಾಖೆ ಭಾಗಶಃ ಖಾಸಗೀಕರಣಗೊಂಡಿದೆ. ಏರ್ ಇಂಡಿಯಾ ಕೂಡ ಖಾಸಗಿ ತೆಕ್ಕೆಗೆ ಬೀಳುವ ಹಂತದಲ್ಲಿದೆ.

ಲಾಭದಲ್ಲಿದ್ದ ವಿಮಾ ಕಂಪೆನಿಗಳಲ್ಲೂ ಖಾಸಗಿ ಹಸ್ತಕ್ಷೇಪ ನಡೆಯುತ್ತಿದೆ. ಒಂದು ಕಾಲದಲ್ಲಿ ರಾಷ್ಟ್ರೀಕರಣಗೊಂಡು ಜನಸಾಮಾನ್ಯರ ಪಾಲಿಗೆ ವರವಾದ ಬ್ಯಾಂಕುಗಳು ಮತ್ತೆ ಖಾಸಗೀಕರಣಗೊಳ್ಳುವ ಅಪಾಯದಲ್ಲಿವೆೆ. ಸದಾ ಭಾರತದ ಸಂಸ್ಕೃತಿ, ಪರಂಪರೆಯ ಬಗ್ಗೆ ಮಾತನಾಡುವ ಬಿಜೆಪಿ ಪಕ್ಷ ಅಧಿಕಾರ ಹಿಡಿದ ಬಳಿಕ ಕನಿಷ್ಠ ಭಾರತೀಯ ಪರಂಪರೆಯನ್ನಾದರೂ ಮೇಲೆತ್ತಲು ಆದ್ಯತೆಯನ್ನು ನೀಡಬಹುದು ಎಂದು ತಿಳಿಯಲಾಗಿತ್ತು. ಆದರೆ, ಇಂದು ಬಿಜೆಪಿಯನ್ನು ಮುಂದಿಟ್ಟು ದೇಶವನ್ನು ಆಳುತ್ತಿರುವುದು ಅದಾನಿ, ಅಂಬಾನಿಗಳಾಗಿದ್ದಾರೆ. ಅವರಿಗೆ ದೇಶದ ಸ್ಮಾರಕಗಳಲ್ಲೂ ಹಣವೇ ಕಾಣುತ್ತಿದೆ. ಇದೀಗ ಅವರದೇ ಸಲಹೆಯ ಪರಿಣಾಮವೋ ಎಂಬಂತೆ, ವಿಫಲ ಆರ್ಥಿಕ ನೀತಿಯಿಂದಾಗಿ ದಿವಾಳಿಯಾಗಿರುವ ಸರಕಾರ ಹಣದ ಕೊರತೆಯನ್ನು ನಿವಾರಿಸಲು ಒಂದೊಂದೇ ಸ್ಮಾರಕಗಳನ್ನು ಉದ್ಯಮಿಗಳಿಗೆ ದತ್ತು ನೀಡುತ್ತಿವೆೆ. ಇದೀಗ ಅಂತಿಮವಾಗಿ, ಕೆಂಪುಕೋಟೆಯನ್ನೇ ಉದ್ಯಮಿಗಳಿಗೆ ಪರೋಕ್ಷವಾಗಿ ಮಾರಲು ಹೊರಟಿದೆ. ಅದೂ ಬರೇ 25 ಕೋಟಿ ರೂಪಾಯಿಗೆ. ದಾಲ್ಮಿಯಾ ಭಾರತ್ ಸಮೂಹ ಇದೀಗ ಭಾರತದ ಚಾರಿತ್ರಿಕ ಸ್ಮಾರಕವನ್ನು ದತ್ತು ತೆಗೆದುಕೊಂಡ ಮೊದಲ ಕಾರ್ಪೊರೇಟ್ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಭಾರತಕ್ಕೂ ಕೆಂಪು ಕೋಟೆಗೂ ಭಾವನಾತ್ಮಕ ಸಂಬಂಧವಿದೆ. ಶಹಜಹಾನ್ ದಿಲ್ಲಿಯಲ್ಲಿ ಕೆಂಪುಕೋಟೆಯನ್ನು ಕಟ್ಟುವ ಮೂಲಕ ತನ್ನ ರಾಜಧಾನಿಯನ್ನು ಆಗ್ರಾದಿಂದ ದಿಲ್ಲಿಗೆ ವರ್ಗಾಯಿಸಿದ. 1857ರ ಮೊತ್ತ ಮೊದಲ ಸ್ವಾತಂತ್ರ ಸಂಗ್ರಾಮ ಮೊಳಗಿದ್ದು ಇದೇ ಕೆಂಪು ಕೋಟೆಯ ಮೂಲಕ. ಈ ದೇಶ ಸ್ವಾತಂತ್ರಗೊಂಡ ದಿನ, ಮೊತ್ತ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕೆಂಪು ಕೋಟೆಯ ಮೇಲೆ ನಿಂತು ಭಾಷಣ ಮಾಡಿದರು. ಪ್ರತಿ ವರ್ಷ ಸ್ವಾತಂತ್ರ ದಿನದಂದು ನಮ್ಮ ಪ್ರಧಾನಿ ಈ ದೇಶಕ್ಕೆ ಸಂದೇಶ ನೀಡುವುದು ಇದೇ ಕೆಂಪು ಕೋಟೆಯ ಮೇಲೆ ನಿಂತು. ಕೆಂಪು ಕೋಟೆ ಈ ದೇಶದ ಅಸ್ಮಿತೆಯ ಭಾಗವಾಗಿದೆ.

ಅದು ಭಾರತದ ಪ್ರಜಾಸತ್ತೆಯನ್ನು ಕಾಯುತ್ತಾ ಬಂದಿರುವ ಕೋಟೆಯಾಗಿದೆ. ಇಂತಹ ಕೆಂಪು ಕೋಟೆಯ ಹೊಣೆಗಾರಿಕೆಯನ್ನು ನೋಡಿಕೊಳ್ಳಲು ತನ್ನಿಂದ ಸಾಧ್ಯವಿಲ್ಲ ಎಂದು ಅದನ್ನು ಒಂದು ಉದ್ಯಮ ಸಂಸ್ಥೆಗೆ ಬರೇ 20 ಕೋಟಿ ರೂಪಾಯಿಗೆ ದತ್ತು ನೀಡುತ್ತದೆ ಎಂದರೆ ಸರಕಾರದ ದೈನೇಸಿ ಸ್ಥಿತಿಯನ್ನು ಊಹಿಸಬಹುದು. ಇದರ ಹಿಂದೆ ಲಾಭದ ಉದ್ದೇಶ ಇಲ್ಲ ಎಂದು ಕೇಂದ್ರ ಹೇಳುತ್ತಿದೆ. ಅದೂ ನಿಜ. ಕೆಂಪುಕೋಟೆಯನ್ನು ವೀಕ್ಷಿಸಲು ಬರುವ ಪ್ರವಾಸಿಗರಿಂದಲೇ 20 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಪ್ರತಿ ವರ್ಷ ಬರುತ್ತಿತ್ತು. ಆ ಆದಾಯವನ್ನು ಬಳಸಿಕೊಂಡೇ ಒಂದು ಖಾಸಗಿ ಉದ್ಯಮಿಗಳು ಮಾಡಬಹುದಾದ ಸುಧಾರಣೆಗಳನ್ನು ಸರಕಾರ ಮಾಡಬಹುದಿತ್ತು. ತನ್ನ ಮಗುವನ್ನು ಸಾಕಲಾರದ ಬಡ ತಾಯಿ, ಅದನ್ನು ಶ್ರೀಮಂತನೊಬ್ಬನಿಗೆ ದತ್ತು ನೀಡಿದಂತಿದೆ ಸರಕಾರದ ಕ್ರಮ. ಅರಣ್ಯವನ್ನು ಒಬ್ಬ ಉದ್ಯಮಿ ಹೆಚ್ಚೆಂದರೆ ರೆಸಾರ್ಟ್ ರೂಪದಲ್ಲಿ ನೋಡಬಲ್ಲ. ಅಲ್ಲಿರುವ ಮರಗಳನ್ನು ಕತ್ತರಿಸಿ ಮಾರಿದರೆ ಸಿಗುವ ಹಣದಿಂದ ಅದರ ಬೆಲೆಯನ್ನು ನಿರ್ಣಯ ಮಾಡಬಲ್ಲ. ಮರಗಳನ್ನು ನಾಶ ಮಾಡಿ ಗಣಿಗಾರಿಕೆ ಮಾಡಿದರೆ ಸಿಗುವ ಲಾಭವನ್ನು ಅದರಲ್ಲಿ ಹುಡುಕಬಲ್ಲ. ಆದರೆ ಒಂದು ದೇಶದ ಪಾಲಿಗೆ ಅರಣ್ಯವೆಂದರೆ ಅಷ್ಟೇ ಅಲ್ಲ. ಅದನ್ನು ಆವಾಸ ಮಾಡಿಕೊಂಡಿರುವ ಕೀಟಗಳೂ ದೇಶದ ಆಸ್ತಿಯಾಗಿವೆ. ಅದನ್ನು ಅವಲಂಬಿಸಿದ ಜೀವವೈವಿಧ್ಯವೊಂದಿದೆ. ನದಿ, ಕಡಲು, ಮಳೆ, ಬಿಸಿಲು ಎಲ್ಲವೂ ಈ ಅರಣ್ಯವನ್ನು ನೆಚ್ಚಿಕೊಂಡಿದೆ. ಅಂತೆಯೇ ಕೆಂಪುಕೋಟೆಯನ್ನು ಒಬ್ಬ ಉದ್ಯಮಿ ನೋಡುವುದಕ್ಕೂ ಈ ದೇಶದ ಶ್ರೀಸಾಮಾನ್ಯನೊಬ್ಬ ನೋಡುವುದಕ್ಕೂ ವ್ಯತ್ಯಾಸವಿದೆ. ಕೆಂಪು ಕೋಟೆಯನ್ನು ಒಂದು ಪಂಚತಾರಾ ಹೊಟೇಲ್ ಮಾಡಿದರೆ ಲಾಭದಾಯಕವೆಂದು ಒಬ್ಬ ಉದ್ಯಮಿ ಭಾವಿಸಬಹುದು. ಅದನ್ನು ವಾಣಿಜ್ಯೀಕರಣಗೊಳಿಸಿ ಎಷ್ಟು ಲಾಭ ಪಡೆಯಬಹುದು ಎನ್ನುವುದನ್ನು ಅವನು ಯೋಚಿಸಬಹುದು. ಆದರೆ ದೇಶದ ಪ್ರಜೆಯ ಪಾಲಿಗೆ ಅದು ದೇಶದ ಆತ್ಮ. ಅಲ್ಲಿರುವ ಪ್ರತಿ ಇಟ್ಟಿಗೆಗಳೂ ಈ ದೇಶದ ಪರಂಪರೆಯನ್ನು ಹೇಳುವ ಮಹತ್ವದ ಅಂಶಗಳು. ತನ್ನ ಆರ್ಥಿಕ ಜೂಜಾಟದಲ್ಲಿ ಈ ದೇಶದ ಸಾರ್ವಜನಿಕ ಉದ್ದಿಮೆಗಳನ್ನೆಲ್ಲ ಒತ್ತೆಯಿಟ್ಟು ಕಳೆದುಕೊಂಡಿರುವ ಪ್ರಧಾನಿ ಮೋದಿ ಸರಕಾರ ಇದೀಗ ಅಂತಿಮವಾಗಿ ಅಳಿದುಳಿದ ಐತಿಹಾಸಿಕ ಸ್ಮಾರಕಗಳನ್ನು ಪಣಕ್ಕಿಡಲು ಹೊರಟಿದೆ.

ಈಗಾಗಲೇ ಹಲವು ಸ್ಮಾರಕಗಳು ಉದ್ದಿಮೆಗಳ ಪಾಲಾಗಿವೆ. ಮುಂದೊಂದು ದಿನ ಇವುಗಳೆಲ್ಲ ಬೃಹತ್ ಉದ್ಯಮಿಗಳ ಪಂಚತಾರ ಹೊಟೇಲ್‌ಗಳಾಗಿ ಬದಲಾದರೆ ಅದರಲ್ಲೂ ಅಚ್ಚರಿಯೇನೂ ಇಲ್ಲ. ಟಿಪ್ಪು ಸುಲ್ತಾನ್ ಬ್ರಿಟಿಷರಿಗೆ ತನ್ನ ತನ್ನ ಸ್ವಂತ ಮಕ್ಕಳನ್ನು ಅಡವಿಟ್ಟು, ತನ್ನ ನೆಲವನ್ನು, ಅದರ ಅಸ್ಮಿತೆಯನ್ನು ರಕ್ಷಿಸಿಕೊಂಡ. ಆದರೆ ಪ್ರಜಾಸತ್ತಾತ್ಮಕ ಸರಕಾರವೊಂದು ನೆಲದ ಅಸ್ಮಿತೆಯನ್ನೇ ಬೃಹತ್ ಉದ್ಯಮಿಗಳಿಗೆ ಒತ್ತೆಯಿಡಲು ಹೊರಟಿದೆ. ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ಬ್ರಿಟಿಷ್ ನೀತಿ ಮೊದಲನೇ ಸ್ವಾತಂತ್ರ ಹೋರಾಟಕ್ಕೆ ನಾಂದಿ ಹಾಡಿತು. ದತ್ತು ಪಡೆದುಕೊಂಡ ಈ ಸ್ಮಾರಕಗಳಷ್ಟೇ ಅಲ್ಲ, ನಮ್ಮ ನಾಡು-ಕಾಡುಗಳ ಮೇಲಿನ ಹಕ್ಕುಗಳಿಗೆ ದೇಶದ ಜನರು ಇನ್ನೊಂದು ಸ್ವಾತಂತ್ರ ಹೋರಾಟ ಮಾಡುವ ಅಗತ್ಯ ಬಿದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X