ಎಕ್ಸ್‌ಪರ್ಟ್‌ನಲ್ಲಿ ಸಾಧನೆಯ ಪರ್ವಕಾಲ: ಶೇ. 99.40 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ

ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ಕೋಡಿಯಾಲ್‌ಬೈಲ್ ಮತ್ತು ವಳಚ್ಚಿಲ್‌ನ ಕ್ಯಾಂಪಸ್‌ನ ಕಾಲೇಜಿನ ಶೇ.98.48ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಪದವಿ ಶಿಕ್ಷಣದಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿದ್ದಾರೆ.
ಕಾಲೇಜಿನಲ್ಲಿ ಒಟ್ಟು ಪರೀಕ್ಷೆ ಬರೆದ 1381 ವಿದ್ಯಾರ್ಥಿಗಳಲ್ಲಿ 1371 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 99.28ರಷ್ಟು ಫಲಿತಾಂಶ ಬಂದಿದೆ. 761 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದರೆ, ಶೇ. 95ಕ್ಕಿಂತ ಅಧಿಕ ಅಂಕವನ್ನು 89 ವಿದ್ಯಾರ್ಥಿಗಳು ಪಡೆದಿದ್ದಾರೆ. ಶೇ.90ಕ್ಕಿಂತ ಅಧಿಕ ಅಂಕವನ್ನು 432 ವಿದ್ಯಾರ್ಥಿಗಳು, ಶೇ.85ಕ್ಕಿಂತ ಅಧಿಕ ಅಂಕವನ್ನು 761 ವಿದ್ಯಾರ್ಥಿಗಳು ಪಡೆದಿದ್ದಾರೆ.
ಒಟ್ಟು 600ರಲ್ಲಿ 589 ಅಂಕ ಪಡೆದ ಎಂ.ಎಂ. ಚಂಚಲ್ ಕೋಡಿಯಾಲ್‌ಬೈಲ್ ಕ್ಯಾಂಪಸ್‌ನ ಟಾಪರ್, 588 ಅಂಕ ಪಡೆದ ನೇಹಾ ಪಿ. ಮಾನೆ ವಳಚ್ಚಿಲ್ ಕ್ಯಾಂಪಸ್‌ನ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ನೇಹಾ ಪಿ. ಮಾನೆ ಅವರು ಫಿಸಿಕ್ಸ್, ಕೆಮೆಸ್ಟ್ರಿ, ಮ್ಯಾಥ್ಸ್, ಸ್ಟ್ಯಾಟ್‌ನಲ್ಲಿ ತಲಾ 100 ಅಂಕ ಪಡೆದರೆ, ಒಟ್ಟು 587 ಅಂಕ ಪಡೆದ ವೈಶ್ವಿ ಪಿ.ಜೆ. ಪಿಸಿಕ್ಸ್, ಕೆಮೆಸ್ಟ್ರಿ, ಮ್ಯಾಥ್ಸ್ ಮತ್ತು ಬಯೋಲಾಜಿಯಲ್ಲಿ ತಲಾ ನೂರು ಅಂಕ ಪಡೆದಿದ್ದಾರೆ. 10 ವಿದ್ಯಾರ್ಥಿಗಳು 3 ವಿಷಯಗಳಲ್ಲಿ, 24 ವಿದ್ಯಾರ್ಥಿಗಳು 2 ವಿಷಯಗಳಲ್ಲಿ ತಲಾ ಒಂದು ನೂರು ಅಂಕ ಪಡೆದಿರುತ್ತಾರೆ.
ಎಂ.ಎಂ. ಚಂಚಲ್ 589, ನೇಹಾ ಪಿ. ಮಾನೆ 588, ಶ್ರೇಯಾ ಭಟ್ 588, ವೈಶ್ವಿ ಪಿ.ಜೆ. 587, ಹರ್ಷಿತಾ ಆರ್. ಕುಮಾರ್ 587, ಯಶ್ವಿತಾ ಬಿ. 587, ಸಿರಿ ಎಲ್.ವೈ 587, ಸಿಂಧು ಎಸ್ 586, ಯಶೋ ಮಂಗಲ್ ಎನ್. 586, ಲಾವಣ್ಯ ಎಸ್.ಆರ್. 585, ಶಾಂಭವಿ ಎಚ್.ಪಿ. 584, ಮೇಘನಾ ಎನ್ 583, ಯಶಸ್ವಿತ್ ಜಿ. 583, ವೃಶಾಲಿ ಕೆ.ಎಸ್ 583, ನೇಹಾ ಮಿಥಾಲ್ 583, ಟಿ.ಎಸ್. ಸಾರಂಗ್ 582, ಯಶಸ್ ಎಸ್.ಡಿ 582, ಆರಾಲ್ ಆಲಿಶಾ ಮೊಂಥೆರೋ 581, ಶುಭದ್ರಾ ಎಂ.ದೇವಾ 581, ಯಶಸ್ ಸಿ.ಎ. 581, ಟಿ. ರೊನಿಶ್ 581, ವೃಂದಾ ಪ್ರಭು 581, ತೇಜಸ್ವಿನಿ ಗಡದ್ 581, ಮಧುರಾ 580, ಶೊನಾಲಿ ಕೆ.ಎಸ್ 580, ಕೆ. ಅಂಕಿತ್ ಪ್ರಭು 580, ನಿಹಾರ್ ಕೆ.ಎಂ 580, ನೇಹಲ್ ಚಕ್ರವರ್ತಿ 580, ಪ್ರಜ್ವಲ್ ವಿ. ಹಿತಲ್ಮಾನಿ 580, ಭಾವನಾ ವಿ. 580, ಸೌಜನ್ಯ ಬಿರಾದಾರ್ 580, ಮೌನ ಎಚ್.ಆರ್. 579, ತರುಣ್ ಬಿ.ಎಲ್. 579, ಅಭಿಜ್ಞಾ ಬಿ.ಆರ್. 579, ಪ್ರಕೃತಿ ಕಾಮತ್ 579, ಶಿವಾತ್ಮಜ ಪಿ.ಎಸ್ 578, ಮಾನ್ವಿತಾ ಮಲ್ಲಿಕ್ 578, ತನ್ಯ ಆರ್.ಡಿ. 578, ರಾಜೇಶ್ವರಿ ದೇವರಮಾಣಿ 577, ಅನನ್ಯ ಬಿ.ಎಸ್. 577, ಶ್ರೀಪ್ರಿಯಾ 577, ವಿ.ಎಂ. ಚೇತನ್ 577, ಅಪೂರ್ವ ಟಿ. 577, ಅಂಶು ಶೆಟ್ಟಿ 577, ಎಸ್.ಎಂ. ಸಂತೋಷ್ 577, ಎಸ್. ವಿಷ್ಣು ಪ್ರದೀಪ್ 576, ಮೋನಿಶಾ ಎಚ್.ಸಿ. 576, ದೀಕ್ಷಿತ್ ಕೆ. ರೆಡ್ಡಿ 576, ಗುರುಶಂತ್ ಜಿ.ಪಿ. 576, ಪ್ರದ್ಯುನ್ಮ ದನಂಜಯ ಪೂಜಾರಿ 576, ವೃಶಾಂಕ್ ಪಿ.ಎನ್. 575, ಪ್ರಗತಿ ಬಿ.ಎಸ್. 575, ಅಂಜಲಿ ಕೆಂಚಕ್ಕನವರ್ 575, ಸುಷ್ಮಾ ಕೆ.ಪಿ. 575, ಅಂಶ ಶೆಟ್ಟಿ ಬಿ. 575, ಅಬ್ರಾರ್ ಉರ್ ರಹಮಾನ್ 575, ಎಚ್.ಕೆ. ಭೂಮಿಕಾ 575, ಅಚ್ಯುತ ರಾವ್ 575, ಸ್ಮೇಹಾ ಪಿ 575, ಆದೀಶ್ ಎ. 575, ಎಚ್.ಪಿ. ಸೃಷ್ಟಿ 574, ಪಿಲ್ಕಿತ್ ಸಿಂಗ್ 574, ದುಷ್ಯಂತ್ ಎಂ. ಗೌಡ 574, ವಿಶಾಲ್ ಎಲ್. ಪಾಟೀಲ್ 574, ಸೃತಿ ಪಿ. 574, ನೇಹಾ ಪಿ.ವಿ. 574, ರಿಶಿತಾ ಎಸ್. ರಮೇಶ್ 573, ಮಾನಸ ಕಾರಂತ್ 573, ವಿನಯಜ್ ಎನ್. 572, ಸಮೀಕ್ಷಾ ಎನ್. ಕಾಮತ್ 572, ಎ.ಎಂ. ಅಂಜನ ರೆಡ್ಡಿ 572, ಅಮೃತಾ ಅಶೋಕ್ ಟಾಟಾಗಲ್ 572, ನಿತಿನ್ ಬಿ.ಎಂ. 572, ಕವನ ಟಿ. 572, ಅಮೋಘ್ ಬೋಳಾರ್ 572, ಅಕ್ಷತಾ ಶೆಣೈ 572, ಸಹನಾ ಎಂ. 571, ಇಂಚರಾ ಜೆ.ಎಂ. 571, ಮೊಹಿತ ಎಂ.ಆರ್. 571, ಎಂ. ಅನಿರುದ್ಧ್ ಮಲ್ಯ 571, ಬಿ. ಅಂಬಿಕಾ ಬಾಳಿಗಾ 571, ಅನರ್ಘ್ಯ 571, ಎಂ. ಗೌರಿ ರೆಡ್ಡಿ 570, ತಂಝೀರಾ ಫರ್ವೀನಾ ಕೆ.ಆರ್. 570, ಲೀಲಾಶ್ರೀ ವಿ. ನಾಯಕ್ 570, ಕೀರ್ತನ್ ನಿರಂಜನ್ 570 ಅಂಕ ಪಡೆದ ಪ್ರಮುಖ ವಿದ್ಯಾರ್ಥಿಗಳಾಗಿದ್ದಾರೆ.
ಫಿಸಿಕ್ಸ್‌ನಲ್ಲಿ 46, ಕೆಮೆಸ್ಟ್ರಿಯಲ್ಲಿ 41, ಮ್ಯಾಥ್ಸ್‌ನಲ್ಲಿ 66, ಬಯೋಲಾಜಿಯಲ್ಲಿ 13, ಸ್ಟ್ಯಾಟಿಸ್ಟಿಕ್ಸ್‌ನಲ್ಲಿ 11, ಕಂಪ್ಯೂಟರ್ ಸೈನ್ಸ್‌ನಲ್ಲಿ 4, ಇಲೆಕ್ಟ್ರಾನಿಕ್ಸ್‌ನಲ್ಲಿ 2, ಸಂಸ್ಕೃತದಲ್ಲಿ 7 ಮತ್ತು ಹಿಂದಿ ಹಾಗೂ ಕನ್ನಡದಲ್ಲಿ ತಲಾ ಒಂದು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್. ನಾಯಕ್ ಅವರು, ಆಡಳಿತ ವರ್ಗ, ಪ್ರಾಂಶುಪಾಲರು, ಎಲ್ಲಾ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳ ಪರವಾಗಿ ಅಭಿನಂದಿಸಿರುತ್ತಾರೆ.







