Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಿಮ್ಮ ಶರೀರದಲ್ಲಿಯ ಹಿಮೋಗ್ಲೋಬಿನ್...

ನಿಮ್ಮ ಶರೀರದಲ್ಲಿಯ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸುವ ಸರಳ ಉಪಾಯಗಳು

ವಾರ್ತಾಭಾರತಿವಾರ್ತಾಭಾರತಿ1 May 2018 1:40 PM IST
share
ನಿಮ್ಮ ಶರೀರದಲ್ಲಿಯ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸುವ ಸರಳ ಉಪಾಯಗಳು

ಹಿಮೋಗ್ಲೋಬಿನ್ ನಮ್ಮ ರಕ್ತಕ್ಕೆ ಕೆಂಪುಬಣ್ಣವನ್ನು ನೀಡುವ ಕಬ್ಬಿಣಯುಕ್ತ ವರ್ಣದ್ರವ್ಯವಾಗಿದ್ದು,ಅದು ಶರೀರದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಪೂರೈಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಡಿಮೆ ಹಿಮೋಗ್ಲೋಬಿನ್ ಕೌಂಟ್ ಅಥವಾ ಪ್ರಮಾಣ ಭಾರತದಲ್ಲಿ,ವಿಶೇಷವಾಗಿ ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ವೈದ್ಯಕೀಯ ತಪಾಸಣೆಯ ಸಂದರ್ಭದಲ್ಲಿ ರಕ್ತಪರೀಕ್ಷೆ ಮಾಡಿದಾಗಲಷ್ಟೇ ನಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಕೌಂಟ್ ಕಡಿಮೆಯಿರುವುದು ನಮಗೆ ಗೊತ್ತಾಗುತ್ತದೆ. ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಇದು ಕಬ್ಬಿಣ ಕೊರತೆ ರಕ್ತಹೀನತೆಗೆ ಕಾರಣವಾಗುತ್ತದೆ.

2015-16ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಂತೆ ಭಾರತದಲ್ಲಿ ಕಬ್ಬಿಣ ಕೊರತೆಯ ಪ್ರಕರಣಗಳು ಅಧಿಕವಾಗಿವೆ.ಆರು ತಿಂಗಳಿನಿಂದ ಒಂದು ವರ್ಷ ಪ್ರಾಯದೊಳಗಿನ ಶೇ.55.9ರಷ್ಟು ಮಕ್ಕಳು(ಹಿಮೋಗ್ಲೋಬಿನ್ ಕೌಂಟ್ 11 ಗ್ರಾಂ/ಡೆಸಿಲೀಟರ್‌ಗಿಂತ ಕಡಿಮೆ) ಮತ್ತು 15ರಿಂದ 49 ವರ್ಷ ವಯೋಮಾನದ ಶೇ.50.8ರಷ್ಟು ಮಹಿಳೆಯರು (13ಜಿ/ಡಿಎಲ್‌ಗಿಂತ ಕಡಿಮೆ) ಹಿಮೋಗ್ಲೋಬಿನ್ ಕೊರತೆಯಿಂಂದ ಬಳಲುತ್ತಿರುವುದು ಕಂಡು ಬಂದಿದೆ.

ಕಬ್ಬಿಣ ಕೊರತೆ ರಕ್ತಹೀನತೆಯು ಕಡಿಮೆ ಹಿಮೋಗ್ಲೋಬಿನ್ ಕೌಂಟ್‌ಗೆ ಪ್ರಮುಖ ಕಾರಣಗಳಲ್ಲೊಂದಾಗಿದೆಯಾದರೂ ಇತರ ಹಲವಾರು ಕಾರಣಗಳೂ ಇವೆ. ಗರ್ಭಾವಸ್ಥೆ,ಋತುಸ್ರಾವ,ಯಕೃತ್ತಿನ ಕಾಯಿಲೆ,ಶಸ್ತ್ರಚಿಕಿತ್ಸೆ ಮತ್ತು ಮೂತ್ರನಾಳ ಸೋಂಕು ಇತ್ಯಾದಿ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಹಿಮೋಗ್ಲೋಬಿನ್ ಕೊರತೆಗೆ ಕಾರಣವಾಗುತ್ತವೆ.

ಹಿಮೋಗ್ಲೋಬಿನ್ ಮಟ್ಟವು ಸಾಮಾನ್ಯಕ್ಕಿಂತ ಕಡಿಮೆಯಾಗಿದ್ದರೆ ಅಂತಹ ವ್ಯಕ್ತಿ ಹಿಮೋಗ್ಲೋಬಿನ್ ಕೊರತೆಯಿಂದ ಬಳಲುತ್ತಿರುತ್ತಾನೆ. ಅದನ್ನು ಹೆಚ್ಚಿಸಿಕೊಳ್ಳಲು ವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ. ಮಹಿಳೆಯರಲ್ಲಿ 12.1ರಿಂದ 15.1ಜಿ/ಡಿಎಲ್,ಪುರುಷರಲ್ಲಿ 13.8ರಿಂದ 17.2 ಜಿ/ಡಿಎಲ್ ಮತ್ತು ಮಕ್ಕಳಲ್ಲಿ 11ರಿಂದ 16 ಜಿ/ಡಿಎಲ್ ಹಿಮೋಗ್ಲೋಬಿನ್ ಮಟ್ಟವಿರಬೇಕು.

ಹಿಮೋಗ್ಲೋಬಿನ್ ಶರೀರದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಪೂರೈಸುವ ಕೆಂಪು ರಕ್ತಕಣಗಳಲ್ಲಿಯ ಪ್ರೋಟಿನ್ ಆಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಸ್ವಲ್ಪ ಕಡಿಮೆಯಾದರೆ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ ಮತ್ತು ಇದೇ ಕಾರಣದಿಂದಾಗಿ ಹೆಚ್ಚಿನವರು ವೈದ್ಯರ ಬಳಿಗೆ ಹೋಗುವುದಿಲ್ಲ. ಗಮನಕ್ಕೆ ಬರದಿದ್ದರೂ ಮತ್ತು ಚಿಕಿತ್ಸೆ ಪಡೆದುಕೊಳ್ಳದಿದ್ದರೂ ಕಡಿಮೆ ಹಿಮೋಗ್ಲೋಬಿನ್ ಕೌಂಟ್ ತನ್ನದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿರುವುದು ವೈದ್ಯರಿಗೆ ಕಾರಣಗಳನ್ನು ಪತ್ತೆ ಹಚ್ಚಲು ನೆರವಾಗುತ್ತದೆ.

ಬಳಲಿಕೆಯೊಂದಿಗೆ ಸಾಮಾನ್ಯ ನಿಶ್ಶಕ್ತಿ,ಉಸಿರಾಟದ ತೊಂದರೆ,ಆಗಾಗ್ಗೆ ವಾಕರಿಕೆಯೊಂಂದಿಗೆ ತಲೆ ಸುತ್ತುವಿಕೆ, ತಲೆನೋವು, ಚರ್ಮದ ಬಣ್ಣ ಪೇಲವಗೊಳ್ಳುವುದು ಮತ್ತು ಉಗುರುಗಳು ಗಡುಸಾಗುವುದು, ತೀವ್ರ ಎದೆಬಡಿತ, ಹಸಿವು ಕಡಿಮೆಯಾಗುವುದು,ಸಣ್ಣಪುಟ್ಟ ಕಾರಣಕ್ಕೂ ತರಚು ಗಾಯಗಳಾಗುವುದು ಮತ್ತು ರಕ್ತ ಹೆಪ್ಪುಗಟ್ಟದಿರುವುದು, ದುರ್ಬಲ ಮೂಳೆಗಳು ಮತ್ತು ಸಂದು ನೋವು,ನಾಲಿಗೆಯಲ್ಲಿ ಕಹಿರುಚಿ,ಏಕಾಗ್ರತೆ ಸಾಧ್ಯವಿಲ್ಲದಿರುವುದು ಇವೆಲ್ಲ ಹಿಮೋಗ್ಲೋಬಿನ್ ಕೊರತೆಯ ಪ್ರಮುಖ ಲಕ್ಷಣಗಳಾಗಿವೆ.

ಹಿಮೋಗ್ಲೋಬಿನ್ ಕೊರತೆಯ ಹೆಚ್ಚಿನ ಪ್ರಕರಣಗಳಲ್ಲಿ ಆರೋಗ್ಯಕರ ಮತ್ತು ಸಂತುಲಿತ ಆಹಾರಸೇವನೆ, ವ್ಯಾಯಾಮದಂತಹ ಜೀವನಶೈಲಿಯಲ್ಲಿನ ಬದಲಾವಣೆಗಳಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ. ಕೆಲವು ಪ್ರಕರಣಗಳಲ್ಲಿ ಕಬ್ಬಿಣಾಂಶ ಪೂರಕಗಳು ಮತ್ತು ಔಷಧಿಗಳ ಸೇವನೆ ಅಗತ್ಯವಾಗಬಹುದು.

ಸಮೃದ್ಧ ಕಬ್ಬಿಣವನ್ನು ಒಳಗೊಂಡಿರುವ ಹೆಚ್ಚಿನ ಆಹಾರ ಸೇವನೆ ಹಿಮೋಗ್ಲೋಬಿನ್ ಕೊರತೆಯನ್ನು ನೀಗಿಸಲು ಸರಳ ಉಪಾಯವಾಗಿದೆ. ಬಸಳೆ,ಪಾಲಕ್,ಚಿಕನ್ ಲಿವರ್,ಶತಾವರಿ,ಮಾಂಸ,ಬ್ರೊಕೋಲಿ, ಹಸಿರು ಬಟಾಣಿ,ಅವರೆ,ಮೆಂತ್ಯ ಸೊಪ್ಪು , ಸಮುದ್ರ ಆಹಾರ, ಕಾಲಿಫ್ಲವರ್, ಟೊಮೆಟೊ, ಬೀಟ್‌ರೂಟ್, ಪಪ್ಪಾಯಿ, ಕಿತ್ತಳೆ, ದಾಳಿಂಬೆ, ಬಾಳೆಹಣ್ಣು, ಸೇಬು, ಲೀಚಿಯಂತಹ ಹಣ್ಣುಗಳು ಸಾಕಷ್ಟು ಕಬ್ಬಿಣವನ್ನು ಹೊಂದಿವೆ. ಹೆಚ್ಚಿನವರು ಸಮೃದ್ಧ ಕಬ್ಬಿಣವಿರುವ ಆಹಾರಗಳನ್ನು ಸೇವಿಸಿದರೂ ಹಿಮೋಗ್ಲೋಬಿನ್ ಮಟ್ಟ ಸುಧಾರಿಸುವುದಿಲ್ಲ. ಇದಕ್ಕೆ ಆಹಾರದಲ್ಲಿಯ ಕಬ್ಬಿಣವನ್ನು ಶರೀರವು ಹೀರಿಕೊಳ್ಳದಿರುವುದು ಕಾರಣವಾಗಿದೆ. ವಿಟಾಮಿನ್ ಸಿ ಕಬ್ಬಿಣವನ್ನು ಹೀರಿಕೊಳ್ಳಲು ನೆರವಾಗುವುದರಿಂದ ಈ ವಿಟಾಮಿನ್‌ಗಳು ಹೇರಳವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಕಬ್ಬಿಣದ ಅಂಶಗಳಿರುವ ಆಹಾರದೊಂದಿಗೆ ಸೇವಿಸುವುದು ಅಗತ್ಯವಾಗುತ್ತದೆ.

ಬಿ-ಕಾಂಪ್ಲೆಕ್ಸ್ ವಿಟಾಮಿನ್‌ಗಳ ವರ್ಗಕ್ಕೆ ಸೇರಿರುವ ಫಾಲಿಕ್ ಆ್ಯಸಿಡ್ ಕೆಂಪು ರಕ್ತಕಣಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ಹೊಂದಿದೆ. ಇದರ ಕೊರತೆಯು ಹಿಮೋಗ್ಲೋಬಿನ್ ಮಟ್ಟವನ್ನು ತಗ್ಗಿಸುವ ಜೊತೆಗೆ ರಕ್ತಹೀನತೆಯ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಹಸಿರು ಎಲೆಗಳಳ ತರಕಾರಿಗಳಂತಹ ಫಾಲಿಕ್ ಆ್ಯಸಿಡ್ ಸಮೃದ್ಧವಾಗಿರುವ ಆಹಾರ ಸೇವನೆಯು ಹಿಮೋಗ್ಲೋಬಿನ್ ಕೊರತೆಯನ್ನು ನೀಗಿಸಲು ನೆರವಾಗುತ್ತದೆ. ಫಾಲಿಕ್ ಆ್ಯಸಿಡ್ ಪೂರಕಗಳು ಲಭ್ಯವಿವೆಯಾದರೂ ವೈದ್ಯರ ಸಲಹೆಯ ಮೇರೆಗಷ್ಟೇ ಸೇವಿಸಬೇಕು.

ಶರೀರವು ಕಬ್ಬಿಣವನ್ನು ಹೀರಿಕೊಳ್ಳಲು ತಡೆಯನ್ನುಂಟು ಮಾಡುವ ಆಹಾರಗಳಿಂದ ದೂರವಿದ್ದರೆ ಒಳ್ಳೆಯದು.ಕ್ಯಾಲ್ಸಿಯಂ ಇಂತಹ ಪ್ರಮುಖ ತಡೆಗಳಲ್ಲೊಂದಾಗಿದೆ. ಹೀಗಾಗಿ ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸುವವರು ಊಟಕ್ಕೆ ಒಂದು ಗಂಟೆ ಮೊದಲು ಅಥವಾ ಊಟವಾದ ಒಂದು ಗಂಟೆಯ ಬಳಿಕ ಅವುಗಳನ್ನು ತೆಗೆದುಕೊಳ್ಳಬೇಕು. ಚಹಾ,ಕಾಫಿ,ವೈನ್,ಬಿಯರ್,ಕೋಲಾ ಮತ್ತು ಇಂಗಾಲೀಕೃತ ಪಾನೀಯಗಳು ಶರೀರವು ಕಬ್ಬಿಣಾಂಶವನ್ನು ಹೀರಿಕೊಳ್ಳಲು ಅಡ್ಡಿಯನ್ನುಂಟು ಮಾಡುತ್ತವೆ.

ಹಿಮೋಗ್ಲೋಬಿನ್ ಕೊರತೆಯು ಅತಿಯಾಗಿದ್ದರೆ ಕಬ್ಬಿಣಾಂಶ ಪೂರಕಗಳನ್ನು ಸೇವಿಸಬಹುದು,ಆದರೆ ಇದಕ್ಕೆ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X