ಮಂಗಳೂರು: ವಿಕಾಸ್ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ

ಮಂಗಳೂರು, ಮೇ 1: ಪಿಯುಸಿ ಪರೀಕ್ಷೆ-2018ರಲ್ಲಿ ವಿಕಾಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ.
ಒಟ್ಟು 414 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ವಿಜ್ಞಾನ ವಿಭಾಗದಲ್ಲಿ 368 ವಿದ್ಯಾರ್ಥಿಗಳಲ್ಲಿ 184 ವಿದ್ಯಾರ್ಥಿಗಳು ವಿಶಿಷ್ಠಿ ಶ್ರೇಣಿ, 178 ವಿದ್ಯಾರ್ಥಿಗಳು ಉನ್ನತ ಶ್ರೇಣಿಯೊಂದಿಗೆ 99.73% ಫಲಿತಾಂಶ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 46 ವಿದ್ಯಾರ್ಥಿಗಳಲ್ಲಿ 18 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ, 27 ವಿದ್ಯಾರ್ಥಿಗಳು ಉನ್ನತ ಶ್ರೇಣಿಯೊಂದಿಗೆ 100% ಫಲಿತಾಂಶ ಪಡೆದಿದ್ದು, ಇದರೊಂದಿಗೆ ಸಂಸ್ಥೆಯು ಒಟ್ಟು 99.76% ಫಲಿತಾಂಶ ಪಡೆದಿದೆ.
ಕಾಲೇಜಿನ ವಿಜ್ಞಾನ ವಿಭಾಗದ ಅರ್ಚನಾ ಪಿ 583 ಅಂಕ ಹಾಗೂ ಅಪೇಕ್ಷಾ ಬಿ ಎಮ್ 583 ಅಂಕ ಪಡೆಯುವುದರೊಂದಿಗೆ ಕಾಲೇಜಿಗೆ ಟಾಪರ್ಸ್ ಆಗಿದ್ದಾರೆ.
ಕಾಮರ್ಸ್ ವಿಭಾಗದ ಪ್ರಜ್ಞಾ ಸಿ 582 ಅಂಕದೊಂದಿಗೆ ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಒಟ್ಟು 49 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. 9 ವಿದ್ಯಾರ್ಥಿಗಳು 580 ಹಾಗೂ ಹೆಚ್ಚಿನ ಅಂಕ ಗಳಿಸಿದ್ದಾರೆ. ಜೊತೆಗೆ 27 ವಿದ್ಯಾರ್ಥಿಗಳು 95% (570/600) ಅಂಕ ಪಡೆದಿದ್ದಾರೆ.
ಸಂಸ್ಥೆಯ ಅಧ್ಯಕ್ಷರಾದ ಕೃಷ್ಣ ಜೆ ಪಾಲೇಮಾರ್ ಮಾತನಾಡಿ ಒಟ್ಟು 414 ವಿದ್ಯಾರ್ಥಿಗಳ ಪೈಕಿ 407 ವಿದ್ಯಾರ್ಥಿಗು ಪರೀಕ್ಷೆಗೆ ಹಾಜರಾಗಿದ್ದು, ಅತ್ಯುನ್ನತ ಹಾಗೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ಯಶಸ್ವಿಯಾಗಿದ್ದಾರೆ. ಇದು ಅತ್ಯುತ್ತಮ ಕಲಿಕಾ ವಿಧಾನ, ಹಾಸ್ಟೆಲ್ ನಲ್ಲಿ ಮನೆಯಂತಹ ವಾತಾವರಣ, ಪ್ರಧ್ಯಾಪಕರ ಲಭ್ಯತೆ ಹಾಗು ಪರಿಶ್ರಮ ಜೊತೆಗೆ ಕಲಿಕೆಯಲ್ಲಿ ವಿದ್ಯಾರ್ಥಿಗಳಿಗಿರುವ ತುಡಿತ ಈ ಎಲ್ಲವುಗಳಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ವಿಕಾಸ್ ಕಾಲೇಜ್ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶ ಪಡೆಯುವಲ್ಲಿ ಶ್ರಮಿಸಲಿದೆ ಎಂದು ಅವರು ಹೇಳಿದರು.
ಕಾಲೇಜಿನ ಕರೆಸ್ಪಾಂಡೆಂಟ್ ಡಾ. ಡಿ. ಶ್ರೀಪತಿ ರಾವ್, ಪ್ರಾಂಶುಪಾಲರಾದ ಪ್ರೊ. ರಾಜಾರಾಮ್ ರಾವ್ ಟಿ, ಉಪ ಪ್ರಾಂಶುಪಾಲರಾದ ಡಾ. ದಿನೇಶ್ ಕೆ., ಅಡ್ವೈಸರ್ ಡಾ. ಅನಂತ ಪ್ರಭು, ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಶುಭ ಹಾರೈಸಿದರು.







