13 ಲಕ್ಷ ರೂ. ಮೌಲ್ಯದ ಜಾಕೆಟ್ ಖರೀದಿಗೆ ಯಾರ ಕ್ರೆಡಿಟ್ ಕಾರ್ಡ್ ಬಳಸಿದ್ದೀರಿ?: ಮೋದಿ ಕಾಲೆಳೆದ ರಮ್ಯಾ

ಬೆಂಗಳೂರು, ಮೇ 1: ವಿಧಾಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಮೋದಿ ಆಗಮನದೊಂದಿಗೆ ರಾಜ್ಯ ಬಿಜೆಪಿ ಪಾಳಯದಲ್ಲಿ ಹುರುಪು ಕಾಣಿಸಿಕೊಂಡಿದೆ. ಈಗಾಗಲೇ ಹಲವು ಕಡೆಗಳಲ್ಲಿ ಮೋದಿ ತಮ್ಮ ಪ್ರಚಾರವನ್ನು ಆರಂಭಿಸಿದ್ದಾರೆ.
ಪ್ರಧಾನಿ ಕರ್ನಾಟಕಕ್ಕೆ ಕಾಲಿಡುತ್ತಿದ್ದಂತೆಯೇ ದುಬಾರಿ ಜಾಕೆಟ್ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ ಮೋದಿ ಕಾಲೆಳೆದಿದ್ದಾರೆ. ಈ ಹಿಂದೆಯೂ ಹಲವು ಬಾರಿ ರಮ್ಯಾ ಮೋದಿ ವಿರುದ್ಧ ಟ್ವೀಟ್ ಮಾಡಿದ್ದರು. “ನಾನು ಕನ್ನಡಿಗ” ಎಂದು ಟ್ವೀಟ್ ಮಾಡಿದ್ದ ಮೋದಿಗೆ ಸಿದ್ದರಾಮಯ್ಯ ಕರ್ನಾಟಕಕ್ಕೆ ಸಂಬಂಧಿಸಿದ 5 ಪ್ರಶ್ನೆಗಳನ್ನು ಕೇಳಿದ್ದರು.
ಇದೀಗ ಮೋದಿ ಜಾಕೆಟ್ ಬಗ್ಗೆ ಟ್ವೀಟ್ ಮಾಡಿದ ರಮ್ಯಾ, “ನರೇಂದ್ರ ಮೋದಿ ಜೀ ಸೋ ಫ್ಯಾನ್ಸಿ! ನಿಮ್ಮ ಮೇಲಿರುವ ಲೋರೋ ಪಿಯಾನ ಜಾಕೆಟ್ ನನಗೂ ಇಷ್ಟ. ಕೇವಲ 17000 ಯೂರೋಗಳು (13 ಲಕ್ಷ ರೂ.)! ತುಂಬಾ ಅಗ್ಗ. ಈ ಜಾಕೆಟ್ ಗೆ ಪಾವತಿ ಮಾಡಲು ಯಾರ ಕ್ರೆಡಿಟ್ ಕಾರ್ಡ್ ಬಳಸಿದ್ದೀರಿ?” ಎಂದವರು ಪ್ರಶ್ನಿಸಿದ್ದಾರೆ.
.@narendramodi ji so fancy! I love the Loro Piana jacket on you! Only 17,000 Euros! Very cheap. Who’s credit card was used to pay for this Modi ji? pic.twitter.com/yK2nsAG63O
— Divya Spandana/Ramya (@divyaspandana) May 1, 2018







