ಬಿಜೆಪಿಯ ಲೂಟಿ ಫಾರ್ಮುಲಾ ಬಗ್ಗೆ ಮಾತನಾಡಿ: ಮೋದಿಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು, ಮೇ 1: ‘2 ರೆಡ್ಡಿ + 1ಯಡ್ಡಿ ಇದು ಕರ್ನಾಟಕ ಲೂಟಿಗೆ ಮುಂದಾಗಿರುವ ಬಿಜೆಪಿಯ ಭ್ರಷ್ಟಾಚಾರದ 2+1 ಫಾರ್ಮುಲಾ. ಮೋದಿಯವರೇ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.
ಮಂಗಳವಾರ ಪ್ರಧಾನಿ ಮೋದಿ ಚಾಮರಾಜನಗದ ಸಂತೆಮಾರಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ‘ಕರ್ನಾಟಕದಲ್ಲಿ ಕಾಂಗ್ರೆಸ್ ಕುಟುಂಬದ ರಾಜಕಾರಣ ತಾಂಡವವಾಡುತ್ತಿದೆ. ಸಿಎಂಗೆ 2 +1 ಫಾರ್ಮುಲಾ, ಉಳಿದ ಮಂತ್ರಿಗಳಿಗೆ 1 + 1 ಫಾರ್ಮುಲದಡಿ ಅವರಿಗೆ ಅವರ ಮಕ್ಕಳಿಗೆ ಟಿಕೆಟ್ ನೀಡಲಾಗಿದೆ. ಇದು ಯಾವ ರೀತಿಯ ಪ್ರಜಾಪ್ರಭುತ್ವ ಎಂದು ಟೀಕಿಸಿದರು.
ಇದಕ್ಕೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೋಮಶೇಖರ್ ರೆಡ್ಡಿ, ಕರುಣಾಕರ ರೆಡ್ಡಿ ಸೇರಿ 2 ರೆಡ್ಡಿ +1 ಯಡ್ಡಿ ಇದು ಕರ್ನಾಟಕ ಲೂಟಿಗೆ ಮುಂದಾಗಿರುವ ಬಿಜೆಪಿ ಫಾರ್ಮುಲಾ. ಈ ಬಗ್ಗೆ ಮೋದಿಯವರೇ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
Next Story





