ಮಂಗಳೂರು: ವಿಶೇಷ ಚೇತನರಿಗಾಗಿ ಬೇಸಿಗೆ ಶಿಬಿರ
ಮಂಗಳೂರು, ಮೇ 1: ಎಕ್ಕೂರಿನ ಬೇ ವ್ಯೆ ಶಿಕ್ಷಣ ಸಂಸ್ಥೆ ಮತ್ತು ದತ್ತಿ ಟ್ರಸ್ಟ್ ವತಿಯಿಂದ ಮೇ 9ರಿಂದ 12ರವರೆಗೆ ವಿಶೇಷ ಚೇತನ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರವು 5ರಿಂದ 12 ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಲಾಗಿದ್ದು, ಬೆಳಗ್ಗೆ 9-30ರಿಂದ 2-30ರವರೆಗೆ ನಡೆಯಲಿದೆ. ಶಿಬಿರ ಉಚಿತವಾಗಿರುತ್ತದೆ ಮತ್ತು ಮಧ್ಯಾಹ್ನದ ಊಟವನ್ನು ಶಿಬಿರಾರ್ಥಿಗಳಿಗೆ ಒದಗಿಸಲಾಗುವುದು.
ಸಜಿತ ಕೃಷ್ಣ ನಾಯಕತ್ವದಲ್ಲಿ ನಡೆಯುತ್ತಿರುವ ಟ್ರಸ್ಟ್‌ನಲ್ಲಿ ವಿಭಿನ್ನ ವಿಧಾನ ಹಾಗೂ ವಿಶೇಷ ಪಠ್ಯಕ್ರಮದೊಂದಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಆಯ್ದ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಆಹಾರವನ್ನು ಒದಗಿಸಲಾಗುತ್ತಿದೆ.
ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತರು ನೋಂದಣಿಗಾಗಿ 0824- 2245111ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Next Story





