ಸುಂಟಿಕೊಪ್ಪ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದೀಪಕ್ ಅಯ್ಯಪ್ಪಗೆ ಉನ್ನತ ಶ್ರೇಣಿ
ಸುಂಟಿಕೊಪ್ಪ, ಮೇ.1: ಪಾರ್ವತಮ್ಮ ಬಡಾವಣೆಯ ನಿವಾಸಿ ದಿನು ದೇವಯ್ಯ ಮತ್ತು ಪುಷ್ಪಾಲತಾ ದಂಪತಿ ಪುತ್ರ ದೀಪಕ್ ಅಯ್ಯಪ್ಪ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97.16 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾನೆ.
ದೀಪಕ್ ಅಯ್ಯಪ್ಪ 600 ಅಂಕಗಳಿಗೆ 583 ಅಂಕ ಗಳಿಸಿದ್ದಾನೆ. ಇಂಗ್ಲೀಷ್ 92, ಹಿಂದಿ 95, ವ್ಯವಹಾರ ಅದ್ಯಯನ 98, ಅರ್ಥಶಾಸ್ತ್ರ 100, ಸ್ಟ್ಯಾಟಿಸ್ಟಿಕ್ಸ್ 100 ಅಂಕ ಗಳಿಸಿದ್ದಾನೆ.
ಮೂಡಬಿದಿರೆಯ ಆಳ್ವಾಸ್ ಪಿಯು ಕಾಲೇಜಿನಲ್ಲಿ ದೀಪಕ್ ಅಯ್ಯಪ್ಪ ವ್ಯಾಸಂಗ ಮಾಡುತ್ತಿದ್ದು, ಮುಂದೆ ಇಂಜಿನಿಯರಿಂಗ್ ಆಗುವ ಗುರಿ ಇಟ್ಟುಕೊಂಡಿದ್ದಾನೆ.
Next Story





