ಆರ್ ಸಿಬಿಗೆ 14 ರನ್ ಗಳ ಜಯ
ಪಾಂಡ್ಯ ಸಹೋದರರ ಹೋರಾಟ ವ್ಯರ್ಥ

ಹಾರ್ದಿಕ್ ಪಾಂಡ್ಯ 50 ರನ್ (42ಎ, 5ಬೌ,1ಸಿ )
ಬೆಂಗಳೂರು, ಮೇ 1:ಐಪಿಎಲ್ ಟ್ವೆಂಟಿ-20 ಟೂರ್ನಿಯ 31ನೇ ಪಂದ್ಯದಲ್ಲಿ ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ರನ್ ಗಳ ಜಯ ಗಳಿಸಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 168 ರನ್ ಗಳ ಸವಾಲು ಪಡೆದ ಮುಂಬೈ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 153 ರನ್ ಗಳಿಸಿತು.
ಮುಂಬೈ ತಂಡದ ಅಗ್ರ ಸರದಿಯ ದಾಂಡಿಗರಾದ ಸೂರ್ಯಕುಮಾರ್ ಯಾದವ್ (9), ಇಶಾನ್ ಕಿಶನ್ (0),ಜೆ.ಪಿ.ಡುಮಿನಿ(23), ನಾಯಕ ರೋಹಿತ್ ಶರ್ಮಾ(0) ಮತ್ತು ಕೀರನ್ ಪೊಲಾರ್ಡ್ (13) ವಿಫಲರಾದರು. ಬಳಿಕ ಪಾಂಡ್ಯ ಸಹೋದರರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಹೋರಾಟ ನಡೆಸಿ 6ನೇ ವಿಕೆಟ್ ಗೆ 56 ರನ್ ಸೇರಿಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ. ಕೃನಾಲ್ ಪಾಂಡ್ಯ 23 ರನ್ ಮತ್ತು ಹಾರ್ದಿಕ್ ಪಾಂಡ್ಯ 50 ರನ್ (42ಎ, 5ಬೌ,1ಸಿ ) ಗಳಿಸಿ ಔಟಾದರು.
ಆರ್ ಸಿಬಿಯ ಟಿಮ್ ಸೌಥಿ , ಉಮೇಶ್ ಯಾದವ್ ಮತ್ತು ಮುಹಮ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆದರು.
Next Story





