ಪ್ರತಿಷ್ಠಿತ ಯುಪಿಎಸ್ಸಿ ಪರೀಕ್ಷೆಯಲ್ಲಿ 51 ಮುಸ್ಲಿಮರ ಆಯ್ಕೆ
ಅಗ್ರ 100ರಲ್ಲಿ 5 ಮಂದಿ ಸಾಧಕರು

ಹೊಸದಿಲ್ಲಿ, ಮೇ 1: ಶುಕ್ರವಾರ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, 51 ಮಂದಿ ಮುಸ್ಲಿಂ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಈ ಪೈಕಿ ಐದು ಮಂದಿ ಮುಸ್ಲಿಮರು ಅಗ್ರ 100ರೊಳಗೆ ರ್ಯಾಂಕಿಂಗ್ ಪಡೆದಿದ್ದಾರೆ.
ಸಾದ್ ಮಿಯಾ ಖಾನ್ 25ನೇ ರ್ಯಾಂಕ್‍ನೊಂದಿಗೆ ಗಮನ ಸೆಳೆದಿದ್ದಾರೆ. ಅಗ್ರ 100 ರ್ಯಾಂಕಿಂಗ್ ಪಡೆದ ಅಭ್ಯರ್ಥಿಗಳ ಪೈಕಿ ಜಮೀಲ್ ಫಾತಿಮಾ ಝೆಬಾ (62ನೇ ರ್ಯಾಂಕ್) ಮತ್ತು ಹಸೀನ್ ಝಹೀರಾ ರಿಝ್ವಿ (87)ಸೇರಿದ್ದಾರೆ.
ಐಎಎಸ್, ಐಪಿಎಸ್ ಹಾಗೂ ಐಎಫ್‍ಎಸ್ ಸೇವೆಗಳಿಗೆ 990 ಮಂದಿಯನ್ನು ನೇಮಕ ಮಾಡಿಕೊಳ್ಳಲು ಯುಪಿಎಸ್ಸಿ ಶಿಫಾರಸ್ಸು ಮಾಡಿದೆ. ಈ ಪೈಕಿ 476 ಮಂದಿ ಸಾಮಾನ್ಯ ವರ್ಗ, 275 ಮಂದಿ ಇತರ ಹಿಂದುಳಿದ ವರ್ಗ, 165 ಮಂದಿ ಪರಿಶಿಷ್ಟರ ಜಾತಿ ಹಾಗೂ 75 ಮಂದಿ ಪರಿಶಿಷ್ಟ ಪಂಗಡದವರು ಸೇರಿದ್ದಾರೆ. ಫಝುಲುಲ್ ಹಸೀಬ್ (36) ಮತ್ತು ಅಝರ್ ನಿಯಾ (97) ಅಗ್ರ 100ರಲ್ಲಿರುವ ಇನ್ನಿಬ್ಬರು.
ಉಳಿದಂತೆ ಸೈಯದ್ ಅಲಿ ಅಬ್ಬಾಸ್ (137), ಮುತೀವುರ್ರಹ್ಮಾನ್ (154), ಅಸೀಂ ಖಾನ್ (165), ಸೈಯದ್ ಇಮ್ರಾನ್ ಮಸೂದ್ (190), ಮುಹಮ್ಮದ್ ಜುನೈದ್ ಪಿ.ಪಿ. (200), ಇಲ್ಮಾ ಅಫ್ರೋಝ್ (217), ಹಸ್ರತ್ ಜಾಸ್ಮಿನ್ (226), ಇಜಾಝ್ ಅಹ್ಮದ್ (282), ಮುಹಮ್ಮದ್ ನೂರ್ ಸಿದ್ದಿಕಿ (326), ಶೇಖ್ ಸಲ್ಮಾನ್ (339), ಜುನೈದ್ ಅಹ್ಮದ್ (352), ಇನಾಬತ್ ಖಾಲಿಕ್ (378), ಸದ್ದಾಮ್ ನವಾಝ್ (384), ಸೈಯದ್ ಝಾಹೆದ್ ಅಲಿ (410), ಫಾರೂಕ್ ಖಾನ್ ಅಖ್ತರ್ (44), ಸೋಫಿಯಾ (445), ಮುಹಮ್ಮದ್ ಶಫೀಕ್ (470), ಜಾಫರ್ ಇಕ್ಬಾಲ್ (471), ಗೌಶ್ ಆಲಂ (485), ಹಾರಿಸ್ ರಶೀದ್ (487), ಇಹ್ ಜಾಸ್ ಅಸ್ಲಂ ಸಿ.ಎಸ್, ಅನಾಮ್ ಸಿದ್ದಿಕಿ, ಹಸನ್ ಸಫಿನ್ ಮುಸ್ತುಫಾಲಿ, ಸಹೀಲಾ, ಮುಹಮ್ಮದ್ ಶಬೀರ್ ಕೆ., ಇರ್ಷಾದ್ ಸಿ.ಎಂ., ಇಬ್ಸನ್ ಶಾ, ಅಲಿ ಅಬೂಬಕರ್ ಟಿ.ಟಿ ಕ್ರಮವಾಗಿ 536, 539, 570, 572, 602, 613, 620, 622 ರ್ಯಾಂಕಿಂಗ್ ಪಡೆದಿದ್ದಾರೆ.
ಆರ್.ರೆಹ್ನಾ, ಅಮಲ್ ನೌಶದ್, ಮುಹಮ್ಮದ್ ನದೀಮುದ್ದೀನ್, ಹಾರಿಶಾ ಬಿ.ಸಿ, ಶಹೀದ್ ಟಿ. ಕೊಮಾತ್, ಶಹೀದ್ ಅಹ್ಮದ್, ಅಜ್ಮಲ್ ಶಹ್ಜದ್ ಅಲಿಯಾರ್ ರಾವ್ತರ್, ಇಮ್ರಾನ್ ಅಹ್ಮದ್ ಕ್ರಮವಾಗಿ 651, 655, 656, 657, 693, 695, 709, 725, 752ನೇ ರ್ಯಾಂಕ್ ಗಳಿಸಿದ್ದಾರೆ.
ಅಫ್ಝಲ್ ಅಹ್ಮದ್ (800), ಸರ್ವಯ್ಯಾ ರಿಯಾಜ್‍ಬಾಯ್ ರಫೀಕ್ ಬಾಯ್, ಶೀರತ್ ಫಾತಿಮಾ, ಅರ್ಷಿಯಾ ಜಾಖು, ಅಮೀರ್ ಬಶೀರ್, ಖಾಲಿದ್ ಹುಸೈನ್, ಆರಿಫ್ ಖಾನ್, ಅತುಲ್ ಚೌಧರಿ, ಮುಹಮ್ಮದ್ ಫಾರೂಕ್ ಕ್ರಮವಾಗಿ 800, 801, 810, 841, 843, 845, 850, 896, 939 ರ್ಯಾಂಕ್ ಗಳಿಸಿದ್ದಾರೆ.







