ಡೆಲ್ಲಿ ಡೇರ್ಡೆವಿಲ್ಸ್ 196/6

ಶ್ರೇಯಸ್ ಅಯ್ಯರ್ 69 ರನ್(29ಎ, 7ಬೌ, 5ಸಿ)
ಹೊಸದಿಲ್ಲಿ, ಮೇ 2: ಐಪಿಎಲ್ ಟ್ವೆಂಟಿ-20 ಟೂರ್ನಿಯ 32ನೇ ಪಂದ್ಯದಲ್ಲಿ ಬುಧವಾರ ರಾಜಸ್ಥಾನ ರಾಯಲ್ಸ್ನ ಗೆಲುವಿಗೆ ಡೆಲ್ಲಿ ಡೇರ್ಡೆವಿಲ್ಸ್ ಕಠಿಣ ಸವಾಲು ವಿಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಡೆಲ್ಲಿ ಡೇರ್ಡೆವಿಲ್ಸ್ ತಂಡ 17.1 ಓವರ್ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 196 ರನ್ ಗಳಿಸಿದೆ.
ನಾಯಕ ಶ್ರೇಯಸ್ ಅಯ್ಯರ್, ವಿಕೆಟ್ ಕೀಪರ್ ರಿಷಭ್ ಪಂತ್ ಅರ್ಧಶತಕಗಳ ಕೊಡುಗೆ ಮತ್ತು ಆರಂಭಕಾರ ಪೃಥ್ವಿ ಶಾ ಅವರ ಉಪಯುಕ್ತ 47 ರನ್ಗಳ ನೆರವು ನೀಡಿದರು. ಮಳೆಯಿಂದಾಗಿ ತಂಡವಾಗಿ ಆರಂಭಗೊಂಡ ಆಟ 18 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ 18ನೇ ಮೊದಲ ಎಸೆತದಲ್ಲಿ ಮಾಕ್ಸ್ವೆಲ್ರನ್ನು ಆರ್ಚೆರ್ ಎಲ್ಬಿಡಬ್ಲು ಬಲೆಗೆ ಕೆಡವಿದರು. ಇದರ ಬೆನ್ನಲ್ಲೇ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು.
ನಾಯಕ ಶ್ರೇಯಸ್ ಅಯ್ಯರ್ 69 ರನ್(29ಎ, 7ಬೌ, 5ಸಿ), ರಿಷಭ್ ಪಂತ್ 50 ರನ್(35ಎ, 3ಬೌ,3ಸಿ), ಆರಂಭಿಕ ದಾಂಡಿಗ ಪೃಥ್ವಿ ಶಾ 47 ರನ್ (25ಎ, 4ಬೌ 4ಸಿ) ಕೊಡುಗೆ ನೀಡಿದರು. ಮ್ಯಾಕ್ಸ್ವೆಲ್ 5ರನ್, ವಿ.ಶಂಕರ್ 17ರನ್ ಗಳಿಸಿ ಔಟಾದರು. ಪ್ಲೆಂಕೆಟ್ 1ರನ್ ಗಳಿಸಿ ಅಜೇಯರಾಗಿ ಉಳಿದರು.ಉನಾದ್ಕಟ್ 46ಕ್ಕೆ 3 ವಿಕೆಟ್ ಪಡೆದರು.





