ಎಕ್ಸಲೆಂಟ್ ಮೂಡುಬಿದಿರೆ: ರಾಜ್ಯಮಟ್ಟದಲ್ಲಿ 2 ರ್ಯಾಂಕ್ಗಳು

ವೈಭವ್ - ಹೇಮಂತ್
ಮೂಡುಬಿದಿರೆ, ಮೇ 2: 2017-18ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಮೂಡಬಿದ್ರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು 99.4%ಶೇಕಡಾ ಗಳಿಸುವುದರೊಂದಿಗೆ ಅತ್ಯುತ್ತಮ ಫಲಿತಾಂಶ ದಾಖಲಿಸಿದೆ.
ವಿಜ್ಞಾನ ವಿಭಾಗದ ವೈಭವ್ ಭಾದ್ರಿ ಎಸ್ 592/600 ಒಟ್ಟು ಅಂಕಗಳನ್ನು ಪಡೆದುಕೊಂಡಿದ್ದು ರಾಜ್ಯದಲ್ಲಿ 5ನೇ ರ್ಯಾಂಕ್ ಹಾಗೂ ಹೇಮಂತ್ ಕೃಷ್ಣಮೂರ್ತಿ ಹೆಗಡೆ 588/600 ಅಂಕಗಳನ್ನುಗಳಿಸುವುದರೊಂದಿಗೆ ರಾಜ್ಯದಲ್ಲಿ 9ನೇ ರ್ಯಾಂಕ್ ಗಳಿಸಿಕೊಂಡಿದ್ದಾರೆ. ಪರೀಕ್ಷೆ ಬರೆದ ಒಟ್ಟು 370 ವಿದ್ಯಾರ್ಥಿಗಳ ಪೈಕಿ 181ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 180 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯನ್ನು ಪಡೆದುಕೊಂಡಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ 585 ಅಂಕಗಳನ್ನು ಗಳಿಸಿಕೊಂಡ ನಿಹಾರಿಕಾ ಶೆಟ್ಟಿ ಹಾಗೂ ರೋಯ್ಡನ್ ಮೆನೇಜಸ್ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ. ಒಟ್ಟು ವಿದ್ಯಾರ್ಥಿಗಳ ಪೈಕಿ 340 ವಿದ್ಯಾರ್ಥಿಗಳು ತಮ್ಮ ಎಸ್ ಎಸ್ ಎಲ್ ಸಿ ಅಂಕಗಳಿಂತ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದಾರೆ.
JEE (Mains) ಯಲ್ಲಿ ಉತ್ಕೃಷ್ಟ ಸಾಧನೆ: JEE(Mains)ನ ಫಲಿತಾಂಶ ಪ್ರಕಟವಾಗಿದ್ದು ಕಾಲೇಜಿನಿಂದ ಪರೀಕ್ಷೆ ಬರೆದಿದ್ದ 65 ವಿಧ್ಯಾರ್ಥಿಗಳಲ್ಲಿ 64 ವಿಧ್ಯಾರ್ಥಿಗಳು ತೇರ್ಗಡೆ ಹೊಂದಿ ಅತ್ಯುತ್ತಮ ಫಲಿತಾಂಶವನ್ನು ಪಡೆದಿರುತ್ತದೆ. ಇದರಲ್ಲಿ ಹೇಮಂತ್ ಕೃಷ್ಣಮೂರ್ತಿ ಹೆಗ್ಡೆ, ಇಷಾ ಎಲ್ ಶೆಟ್ಟಿ, ಯಶವಂತ್ ಆರ್, ಸಾಕ್ಷಾತ್ ಸೆಟ್ಟಿ ಜಿ. ಶ್ರೀಗುರು ಭಟ್ ಹಾಗೂ ಆರ್ಥಿಕ್ ರಾವ್ ಇವರು ಕಾಲೇಜಿನಲ್ಲಿ ಅಗ್ರಸ್ಥಾನವನ್ನು ಪಡೆದಿರುತ್ತಾರೆ.
10ನೇ ತರಗತಿಯಿಂದ ಉತ್ತೀರ್ಣಗೊಂಡ ವಿಧ್ಯಾರ್ಥಿಗಳನ್ನು ಯಾವುದೇ ಶೇಕಡವಾರು ನಿಬಂದನೆಗಳಿಲ್ಲದೆ ಪ್ರವೇಶವನ್ನು ನೀಡಿ ಅತ್ಯುತ್ತಮ ಫಲಿತಾಂಶವನ್ನು ಗ್ರಾಮೀಣ ಪ್ರದೇಶದಲ್ಲಿ ನೀಡಿರುವುದು ರಾಜ್ಯದಲ್ಲಿಯೇ ಒಂದು ದಾಖಲೆಯಾಗಿದೆ. ಪ್ರಕೃತಿದತ್ತವಾದ ಪರಿಸರ, 20 ವರ್ಷಗಳಿಗಿಂತಲೂ ಹೆಚ್ಚಿನ ಅನುಭವವಿರುವ ಪ್ರಾಧ್ಯಾಪಕ ವೃಂದ, ಕಲಿಕೆಯಲ್ಲಿ ನವೀನ ವೈಜ್ನಾನಿಕ ಮಾದರಿಯ ಪದ್ದತಿಗಳ ಹಾಗೂ ಪರಿಕರಗಳ ಬಳಕೆ, ವೈಜ್ಣಾನಿಕ ರೀತಿಯ ವಸತಿ ಮತ್ತು ಆಹಾರ ಪದ್ದತಿಗಳು ವಿದ್ಯಾರ್ಥಿಗಳ ಜ್ನಾನಾರ್ಜನೆಗೆ ಸಹಕಾರಿಯಾಗಿದೆ. ಅತ್ಯುತ್ತಮ ಫಲಿತಾಂಶ ಪಡೆಯಲು ಕಾರಣಕರ್ತರಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಹಾಗೂ ಅಧ್ಯಾಪಕವೃಂದವನ್ನು ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಹಾಗೂ ಕಾರ್ಯದರ್ಶಿ ರಶ್ಮಿತಾ ಜೈನ್ ವಿಶೇಷವಾಗಿ ಅಭಿನಂದಿಸಿರುತ್ತಾರೆ.







