ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ 60ಕ್ಕೂ ಅಧಿಕ ಪ್ರಶಸ್ತಿ ವಿಜೇತರು ಗೈರು
ಕಲಾವಿದರ ಈ ನಿರ್ಧಾರಕ್ಕೆ ಕಾರಣ ಏನು ಗೊತ್ತಾ?

ಹೊಸದಿಲ್ಲಿ, ಮೇ 3: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕೇವಲ 11 ಪ್ರಶಸ್ತಿಗಳನ್ನು ಮಾತ್ರ ವಿತರಿಸಲಿರುವ ಕಾರಣ 60ಕ್ಕೂ ಹೆಚ್ಚು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು ಪ್ರಶಸ್ರಿ ಪ್ರದಾನ ಕಾರ್ಯಕ್ರಮಕ್ಕೆ ಗೈರು ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಹೆಚ್ಚಿನ ಪ್ರಶಸ್ತಿಗಳನ್ನು ಮಾಹಿತಿ ಹಾಗು ಪ್ರಸಾರ ಸಚಿವೆ ಸ್ಮೃತಿ ಇರಾನಿ ಪ್ರದಾನಿಸಲಿದ್ದಾರೆ.
ನಾವು ಈಗಾಗಲೇ ಈ ಬಗ್ಗೆ ಸ್ಮೃತಿ ಇರಾನಿಯವರೊಂದಿಗೆ ಮಾತನಾಡಿದ್ದೇವೆ. ಅವರೂ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದ್ದಾರೆಯೇ ಹೊರತು ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕಲಾವಿದರು ತಿಳಿಸಿದ್ದಾರೆ.
“ನಮಗೆ ಕಾರ್ಯಕ್ರಮಕ್ಕೆ ಗೈರಾಗದೆ ಬೇರೆ ಆಯ್ಕೆಗಳಿಲ್ಲ. ನಾವು ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಿಲ್ಲ. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ” ಎಂದು ಕಲಾವಿದರು ಪತ್ರದಲ್ಲಿ ತಿಳಿಸಿದ್ದಾರೆ.
Next Story





