ಕೊಳ್ಳೇಗಾಲ : ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಮತಯಾಚನೆ

ಕೊಳ್ಳೇಗಾಲ,ಮೇ.03: ದೇಶದಲ್ಲಿ ಜನರಿಗೆ ಎಲ್ಲಾ ಸೌಭಾಗ್ಯ ಕೊಟ್ಟಂತಹ ಸರ್ಕಾರವೆಂದರೆ ಅದು ಕರ್ನಾಟಕದ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರ ಸರ್ಕಾರ ಎಂದು ಪಕ್ಷದ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರು ಹೇಳಿದರು.
ತಾಲ್ಲೂಕಿನ ಉತ್ತಂಬಳ್ಳಿ, ಕುಣಗಳ್ಳಿ, ಸೂರಾಪುರ, ರಾಂಪುರ, ಬೂದಿತಿಟ್ಟು, ಬನ್ನಿಸಾರಿಗೆ ಸೇರಿದಂತೆ ಇನ್ನಿತರ ಕಡೆ ಗುರುವಾರ ಮತಯಾಚನೆ ನಡೆಸಿ ನಂತರ ಸಭೆಯಲ್ಲಿ ಅವರು ಮಾತನಾಡಿದರು.
"ನಾನು ಉತ್ತಂಬಳ್ಳಿ ಗ್ರಾಮಕ್ಕೆ ಪ್ರಚಾರಕ್ಕೆ ಹೋಗಿದ್ದ ವೇಳೆ ಅಲ್ಲಿನ ವೃದ್ಧೆ ಮರಿಸಿದ್ದಮ್ಮನವರು ಆಗಮಿಸಿ ಇಂದಿರಾಗಾಂಧಿರವರ ಪಕ್ಷದಿಂದ ಸ್ಪರ್ಧೆ ಮಾಡಿದ್ದೀಯಾ ಅವರು ನಮ್ಮೆಲ್ಲರನ್ನೂ ಕಾಪಾಡಿದಂತ ಮಹಾನ್‍ತಾಯಿ ಎಂದು ಹೇಳಿ ಅವರ ಬಳಿ ಇದ್ದ ಒಂದು ತಿಂಗಳ ವೃದ್ಧಪ್ಯಾವೇತನದ ಹಣವನ್ನು ನೀಡಿ ಗೆದ್ದು ಬಾ ಎಂದು ಮಾಡಿದ ಆರ್ಶಿವಾದ ಮತ್ತೆ ಕಾಂಗ್ರೇಸ್ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಒಂದು ಮತದಿಂದ ಆ ಸೋಲು ಇಡೀ ಜಗತ್ತಿಗೆ ಪ್ರಸಿದ್ಧಿಯಾಯಿತು. ಅಂದಿನಿಂದ ಇಂದಿನವರೆಗೂ ನಾನು ಅನುಭವಿಸಿದ ರಾಜಕೀಯದ ವನವಾಸವನ್ನು ಮುಕ್ತಿಗೊಳಿಸಲು ಸಿದ್ದರಾಮಯ್ಯನವರು ನಮ್ಮ ತಂದೆ ಬಿ.ರಾಚಯ್ಯನವರ ಮೇಲಿರುವ ಪ್ರೀತಿ ವಿಶ್ವಾಸದ ಮೇರೆಗೆ ಬಿಜೆಪಿ ಪಕ್ಷ ತೊರೆದಿದ್ದ ನನ್ನನು ಕರೆತಂದು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಎಲ್ಲಾ ಚುನಾಯಿತ ಪ್ರತಿನಿಧಿಗಳ ಒಪ್ಪಿಗೆ ಪಡೆದು ನನಗೆ ಟಿಕೆಟ್ ನೀಡಿದ್ದಾರೆ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಎಲ್ಲಾ ಮತದಾರರು ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ನೀಡುವ ಮೂಲಕ ನನ್ನ ರಾಜಕೀಯ ವನವಾಸವನ್ನು ಮುಕ್ತಿಗೊಳಿಸಿ ಎಂದು ಮನವಿ ಮಾಡಿದರು.
ಚಾ.ನಗರ ಚುನಾವಣಾ ಜಿಲ್ಲಾ ಉಸ್ತುವರಿ, ತಮಿಳುನಾಡಿನ ಸಂಸದ ಹಾಗೂ ಎಐಸಿಸಿ ಸದಸ್ಯ ವಿಶ್ವನಾಥ್ ಮಾತನಾಡಿ, ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ದೇಶದಲ್ಲಿ ಮಾದರಿಯಾಗಬೇಕು ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಬಿಜೆಪಿ ಹಾಗೂ ಬಿಎಸ್‍ಪಿ ತೊರೆದು ನಾಗರಾಜು, ಮಧು ಹೋಂಗಾರ್ಡ ಶಿವಣ್ಣ, ಬಸವರಾಜು ರಾಜಣ್ಣ ಸೇರಿದಂತೆ ಇನ್ನಿತರರು ಶಾಸಕ ಎಸ್.ಜಯಣ್ಣ ಹಾಗೂ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ನೇತೃತ್ವದಲ್ಲಿ ಸೇರ್ಪಡೆಗೊಂಡರು.
ಮತಯಾಚನೆ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಸಂತಿಶಿವಣ್ಣ, ಶಾಸಕ ಎಸ್.ಜಯಣ್ಣ, ಬ್ಲಾಕ್ ಕಾಂಗ್ರೇಸ್ ತೋಟೇಶ್, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಿವಕುಮಾರ್, ಮುಖಂಡ ಕಿನಕಹಳ್ಳಿ ರಾಚಯ್ಯ, ಕುಣಗಳ್ಳಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಉತ್ತಂಬಳ್ಳಿ ಮಾದೇಶ್, ರಾಜ್ಯ ರಸ್ತೆ ನಿಗಮದ ಸದಸ್ಯ ರಾಜೇಂದ್ರಮೋಳೆ, ಪ್ರಚಾರ ಸಮಿತಿ ಉಪಾಧ್ಯಕ್ಷ ಜಯಶಂಕರ್, ಹಾಲು ಒಕ್ಕೂಟದ ಸದಸ್ಯ ಮಧುವನಹಳ್ಳಿ ನಂಜುಂಡಸ್ವಾಮಿ, ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಚೇತನ್‍ದೊರೆರಾಜು, ಮೀಸಲು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಬ್ದುಲ್‍ಅಜೀಜ್, ಸೂರಾಪುರ ನಾಡಗೌಡ್ರು ರಾಜು, ಮುಡಿಗುಂಡ ಶಾಂತರಾಜು, ಕಂದಹಳ್ಳಿ ನಂಜುಂಡಸ್ವಾಮಿ, ಹೊಂಗನೂರು ಚೇತನ್, ಬಾಗಳಿಚಂದ್ರು, ಡಿ.ಸಿದ್ದರಾಜು, ವೀರಭದ್ರಗೌಡ, ಚಿಕ್ಕಮಾದು, ಶಿವಣ್ಣ, ಲಿಂಗರಾಜು, ಬಸವರಾಜು, ನಾಗರಾಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು.







