ಯೋಗ್ಯರು ಮಾತ್ರ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಗೆ ಪ್ರವೇಶಿಸಬೇಕು : ನಂಜೇರಾಜ ಅರಸ್

ಕೊಳ್ಳೇಗಾಲ,ಮೇ.03: ಯೋಗ್ಯರು ಮಾತ್ರ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಗೆ ಪ್ರವೇಶಿಸಬೇಕು ಎಂದು ನಿವೃತ್ತ ಪ್ರಾಧ್ಯಪಕ ಹಾಗೂ ಇತಿಹಾಸ ತಜ್ಞ ನಂಜೇರಾಜ ಅರಸ್ ಹೇಳಿದರು.
ನಗರದ ಬಸ್ತಿಪುರ, ಬಸವೇಶ್ವರ ನಗರ, ವಿದ್ಯಾನಗರದಲ್ಲಿ ಗುರುವಾರ ಬಿಎಸ್‍ಪಿ ಅಭ್ಯರ್ಥಿ ಎನ್.ಮಹೇಶ್ ಅವರ ಪರ ಮತಯಾಚನೆ ಮಾಡಿ ಮಾತನಾಡಿದರು.
ವಿಧಾನಸೌಧದಲ್ಲಿ ಆಶ್ಲೀಲ ಚಿತ್ರಗಳನ್ನು ನೋಡುವುದು ಮತ್ತು ಜಗಳವಾಡುವವರು ರಾಜ್ಯದ ಜನತೆಗೆ ಏನು ಮಾಡುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯು ಸಹ ಅಭ್ಯರ್ಥಿಗಳ ಗುಣ ನಡತೆ ನೋಡಿ ಮತದಾನ ಮಾಡಬೇಕು. ನಾನು ಯಾವ ಪಕ್ಷದವನ್ನು ಸಹ ಅಲ್ಲ ಯಾವ ರಾಜಕೀಯ ವ್ಯಕ್ತಿಗಳಿಗೂ ಸಹ ಮತ ಪ್ರಚಾರ ಮಾಡುವುದಿಲ್ಲ ಆದರೆ ಎನ್.ಮಹೇಶ್ ಹಾಗೂ ಮತ್ತಿತರ ಕೆಲವು ವ್ಯಕ್ತಿಗಳ ಗುಣ, ವ್ಯಕ್ತಿತ್ವ, ಮತ್ತು ಹೋರಾಟಗಾರರ ನಡುವೆ ಪ್ರಚಾರ ಮಾಡುತ್ತೇನೆ.
ಇಂತಹ ಮಹನ್ ಹೋರಾಟಗಾರನನ್ನು ನೀವು ಯಾಕೆ 3 ಬಾರಿ ಸೋಲಿಸಿದ್ದಿರಿ ಈ ಬಾರಿ ಆ ವ್ಯಕ್ತಿಯನ್ನು ಗೆಲ್ಲಿಸಿ ಮತ್ತೆ ಸೋಲಿಸಿ ಸಾಯಿಸಬೇಡಿ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತಿ ಬನ್ನೂರು ರಾಜು ಮಾತನಾಡಿ, ಬಿಎಸ್‍ಪಿ ಕೇವಲ ದಲಿತ ಸಮುದಾಯಕ್ಕೆ ಸೀಮಿತವಲ್ಲ ಎಲ್ಲ ವರ್ಗದ ಜನರಿಗೆ ಸೀಮಿತ. ರಾಜ್ಯದಲ್ಲಿ ನಡೆಯಲ್ಲಿರುವ ಈ ಬಾರಿ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೆಡಿಎಸ್ ಮತ್ತು ಬಿಎಸ್‍ಪಿ ಸಮಿಶ್ರ ಸರ್ಕಾರದಲ್ಲಿ ಮತ್ತೆ ಮುಖ್ಯ ಮಂತ್ರಿಯಾಗುತ್ತಾರೆ. ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಹಾಗೂ ಜೆಡಿಎಸ್ ವರಿಷ್ಟರಾದ ದೇವೆಗೌಡರು ಮಾತುಕತೆ ನಡೆಸಿ ರಾಜ್ಯದಲ್ಲಿ ಜನಪರ, ಜನಸ್ನೇಹಿ ಹಾಗೂ ಅಭಿವೃದ್ದಿ ಸರ್ಕಾರ ತರುವ ನಿಟ್ಟಿನಲಿ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.
ಕರ್ನಾಟಕ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಯಮುನಾ ಮಾತನಾಡಿ, ಬಿಎಸ್‍ಪಿ ಪಕ್ಷವು ಮನುಕುಲಕ್ಕೆ ಸಮಾನತೆ ನೀಡುವುಂತಹ ಪಕ್ಷ. ನಾನು ಕ್ಷೇತ್ರದ ಸುತ್ತುವ ಸಮಯದಲ್ಲಿ ಗ್ರಾಮೀಣ ಜನರು ಹೆಚ್ಚಾಗಿ ಬಿಎಸ್ಪಿ ಪಕ್ಷಕ್ಕೆ ಒಲುವು ತೊರಿದ್ದಾರೆ. ಆದ್ದರಿಂದ ಈ ಬಾರಿ ಬಿಎಸ್ಪಿ ಅಭ್ಯರ್ಥಿ ಎನ್.ಮಹೇಶ್ ಅವರು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಮತಯಾಚನೆಯಲ್ಲಿ ಬಿಎಸ್‍ಪಿ ಅಭ್ಯರ್ಥಿ ಪುತ್ರ ಅರ್ಜುನ್, ನಗರಸಭೆ ಸದಸ್ಯ ರಂಗಸ್ವಾಮಿ, ಜೆಡಿಎಸ್ ಟೌನ್ ಅಧ್ಯಕ್ಷ ಕೃಷ್ಣಯ್ಯ, ಮುಖಂಡರಾದ ಚಾಮರಾಜು, ರವೀಂದ್ರ, ಸೋಮಣ್ಣ ಉಪ್ಪಾರ್, ಸೋಸಲೆ ಸಿದ್ದರಾಜು, ಕುಮಾರ್, ಜಾಕಾವುಲ್ಲ, ಮಲ್ಲಿಕಾರ್ಜುನ, ಚೌಡಯ್ಯ, ರಾಚಪ್ಪ, ಸಿದ್ದರಾಜು, ಪುಟ್ಟಮಲ್ಲಯ್ಯ, ಕುಮಾರ್ ರಾಜಶೇಖರ್, ಮಣಿ, ಮಹೇಶ್, ಶಂಕರ್, ಮೂರ್ತಿ, ಮತ್ತಿತರರು ಇದ್ದರು.







