ಸಿದ್ದರಾಮಯ್ಯ ಜಾತಿ-ಜಾತಿಗಳನ್ನು ಒಡೆಯುತ್ತಿದ್ದಾರೆ: ಆದಿತ್ಯನಾಥ್ ಆರೋಪ

ಚಿಕ್ಕಮಗಳೂರು, ಮೇ 3: ಕರ್ನಾಟಕ ಹಾಗೂ ಉತ್ತರ ಪ್ರದೇಶಕ್ಕೂ ನಿಕಟ ಸಂಬಂಧವಿದೆ. ಉತ್ತರ ಪ್ರದೇಶದಲ್ಲಿ ಶಿವ ಪ್ರಮುಖನಾದರೆ, ಕರ್ನಾಟಕದಲ್ಲಿ ಹನುಮಾನ್ ಪ್ರಮುಖನಾಗಿದ್ದಾರೆ. ಸಿದ್ದರಾಮಯ್ಯ ಅವರು ಜಾತಿ ಜಾತಿಗಳನ್ನು ಒಡೆಯುತ್ತಿದ್ದರೆ ನಾವು ಎಲ್ಲಾ ಜಾತಿಯವರನ್ನು ಒಗ್ಗೂಡಿಸುತ್ತಿದ್ದೇವೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದರು.
ಬಾಳೆಹೊನ್ನೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದ ಮಹಾಜನತೆಗೆ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು. ಉಗ್ರಗಾಮಿಗಳನ್ನು ಸದೆಬಡಿಬೇಕು ಎಂದರೆ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತವನ್ನಾಗಿ ಮಾಡಬೇಕು. ಕಾಂಗ್ರೆಸ್ ಸರಕಾರವು ಜಿಹಾದಿಗಳನ್ನು ಸೃಷ್ಟಿ ಮಾಡುವ ಸರಕಾರವಾಗಿದೆ. ಈ ಸರಕಾರವು ರೈತರ ವಿರೋಧಿ ಸರ್ಕಾರವಾಗಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಹಾಗು ಕರ್ನಾಟಕದಲ್ಲಿ ಯಡಿಯೂರಪ್ಪನವರ ಸರಕಾರ ರಚನೆಯಾಗಬೇಕು ಎಂದವರು ಇದೇ ಸಂದರ್ಭ ಹೇಳಿದರು.
ಬಾಳೆಹೊನ್ನೂರಿಗೆ ಹೆಲಿಕಾಪ್ಟರ್ ಮೂಲಕ ಬಂದಿಳಿದ ಆದಿತ್ಯನಾಥ್ ಬಾಳೆಹೊನ್ನೂರು ಮಠಕ್ಕೆ ಭೇಟಿ ನೀಡಿದರು.
Next Story





