ಅಪಪ್ರಚಾರದಲ್ಲಿ ಬಿಜೆಪಿಗರು ಪಿಎಚ್‌ಡಿ ಪಡೆದವರು: ವಿನಯ್‌ರಾಜ್

ಮಂಗಳೂರು, ಮೇ 3: ದಾಖಲೆ ರಹಿತವಾಗಿ ಅಪಪ್ರಚಾರ ಮಾಡುವಲ್ಲಿ ಬಿಜೆಪಿಯ ಕಾರ್ಯಕರ್ತನಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿಯವರೆಗೆ ಪಿಎಚ್‌ಡಿ ಪಡೆದವರು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ ವಿನಯರಾಜ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪ್ರಚಾರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಕಾರ್ಪೊರೇಟರ್ ರೂಪಾ ಡಿ. ಬಂಗೇರ ಅವರು ಶಾಸಕ ಜೆ.ಆರ್. ಲೋಬೋ ವಿರುದ್ಧ ಮಾಡಿರುವ ಆೋಪಗಳು ದಾಖಲೆ ರಹಿತ ಎಂದರು.
ದನ, ಧರ್ಮದ ವಿಷಯದಲ್ಲಿ ರಾಜಕೀಯ ಮಾಡುವ ಬಿಜೆಪಿಗರು ಸಂವಿಧಾನದ ಮೇಲೆ ವಿಶ್ವಾಸವಿದ್ದರೆ, ಅಭಿವೃದ್ಧಿಯ ಕುರಿತಂತೆ ಚರ್ಚೆಗೆ ಬರಲಿ, ತಾವು ಸಿದ್ಧ ಎಂದು ಸವಾಲೆಸೆದರು.
ಕೇಂದ್ರ ಸರಕಾರದ ಹಣ ರಾಜ್ಯಗಳಿಂದ ತೆರಿಗೆ ರೂಪದಲ್ಲಿ ಜನರಿಂದ ಪಡೆಯಲಾದ ಹಣ. ಅದನ್ನೇ ಕೇಂದ್ರ ಸರಕಾರ ರಾಜ್ಯಗಳಿಗೆ ಅನುದಾನದ ರೂಪದಲ್ಲಿ ನೀಡುವುದು. ಸಂಸದರು ತಮ್ಮ ಕರ್ತವ್ಯವನ್ನು ಮಾಡಿ ತೋರಿಸಲಿ. ಪಂಪ್‌ವೆಲ್ ಫ್ಲೈ ಓವರ್ ಇನ್ನೂ ಪೂರ್ಣ ಮಾಡಲಾಗಿಲ್ಲ. ಸುಳ್ಳು ಹಾಗೂ ಅಪಪ್ರಚಾರಗಳ ಮೂಲಕ ಜನರ ಭಾವನೆ ಕೆರಳಿಸುವ,ಹಾದಿ ತಪ್ಪಿಸುವ ಕೆಲಸ ಮಾಡುತ್ತಿರುವ ಬಿಜೆಪಿ ನಾಯಕರು ದಾಖಲೆ ಇಲ್ಲದೆ ಆರೋಪಗಳನ್ನು ಮಾಡುತ್ತಿದಾದರೆ. ಶಾಸಕ ಜೆ.ಆರ್. ಲೋಬೋ ಅವರ ಸಾಧನೆಯ ಪುಸ್ತಕ ಜನರ ಮನೆಗಳಿಗೆ ತಲುಪಿದಾಕ್ಷಣ ಬಿಜೆಪಿ ಕಂಗಾಲಾಗಿ ಈ ರಿೀತಿ ಮಾಡುತ್ತಿದೆ ಎಂದು ಆಪಾದಿಸಿದರು.
ಅಮೃತ್ ಯೋಜನೆಯನ್ನು ಶಾಸಕರು ಅವರ ಶ್ರಮದಿಂದ ಮಂಗಳೂರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅದರ ಅನುದಾನವನ್ನು ಕೇಂದ್ರ ಸರಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಸಂಸದರು ಯಾಕೆ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದವರು ಪ್ರಶ್ನಿಸಿದರು. ಮೂರನೆ ಹಂತದ ಬಂದರು ಅಭಿವೃದ್ಧಿ ಯೋಜನೆಗೆ ರಾಜ್ಯ ಸರಕಾರ ಈಗಾಗಲೇ 52 ಕೋಟಿ ರೂ. ಖರ್ಚು ಮಾಡಿದೆ. ರಾಜ್ಯ ಮತ್ತು ಕೇಂದ್ರದ 60:40 ಅನುಪಾತದ ಯೋಜನೆ. ರೂ. 30 ಕೋಟಿ ರೂ. ಬಿಡುಗಡೆ ಮಾಡುವ ಬದಲು ಕೇವಲ 12 ಕೋಟಿ ರೂ. ಮಾತ್ರ ಬಿಡುಗಡೆ ಕೇಂದ್ರ ಮಾಡಿದೆ. ಕೇಂದ್ರದ ಮಲತಾಯಿ ದೋರಣೆಯಿಂದ ಯೋಜನೆಯ ಮೊತ್ತ ಈಗ 90 ಕೋಟಿ ರೂ. ತಲುಪಿದೆ. ಏರಿಕೆಯಾದ ಬಾಕಿ ಮೊತ್ತವನ್ನು ರಾಜ್ಯ ಸರಕಾರವೇ ಭರಿಸಬೇಕೆಂದು ಹಠ ಹಿಡಿದಿರುವ ಕಾರಣ ಯೋಜನೆ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಸಂಸದರು ಯಾಕೆ ಗಮನಹರಿಸುತ್ತಿಲ್ಲ ಎಂದು ವಿನಯರಾಜ್ ಪ್ರಶ್ನಿಸಿದರು.
ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ವೇಳೆ ಮಂಗಳೂರು ನಗರಕ್ಕೆ 300 ಕೋಟಿರೂ. ಅನುದಾನ ಪ್ರಕಟಿಸಿದ್ದು ಮಾತ್ರ. 2 ಮತ್ತು 3ನೆ ಹಂತದ 100 ಕೋಟಿ ಹಣವನ್ನು ಬಿಡುಗಡೆ ಮಾಡಿರುವುದು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ. ಮಂಗಳೂರು ನಗರದ ಸಮಗ್ರ ಅಭಿವೃದ್ಧಿ ಮಾಡಿದ ಬಗ್ಗೆ ದಾಖಲೆಯ ಆಧಾರದ ಮೇಲೆ ಸಾಧನೆಯ ಹಾದಿಯಲ್ಲಿ ಪುಸ್ತಕ ನಮೂದು ಮಾಡಲಾಗಿದೆ. 2013ರಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಆಡಳಿತಕ್ಕೆ ಬಂದಾಗ ಗುತ್ತಿಗೆದಾರರಿಗೆ ಸುಮಾರು 15 ಸಾವಿರ ಕೋಟಿ ರೂ. ಮೊತ್ತದ ಬಿಲ್ಲು ಪಾವತಿ ಮಾಡಲು ಬಾಕಿ ಇಟ್ಟು ಸರಕಾರದ ಮೇಲೆ ಹೊರೆ ಹಾಕಿದ್ದು ಯಡಿಯೂರಪ್ಪ ನೇತೃತ್ವದ ರಕಾರ ಎಂದು ಅವರು ಹೇಳಿದರು.
ಶಾಸಕ ಜೆ.ಆರ್. ಲೋಬೋ ಶಾಸಕರಾಗಿ ಆಯ್ಕೆಯಾಗಿ ಬಂದ ಸಂದರ್ಭದಲ್ಲಿ ಕಾಂಕ್ರೀಟೀಕರಣವಾಗಿದ್ದ ಯಾವುದೇ ರಸ್ತೆಗೆ ಫುಟ್‌ಪಾತ್ ಇರಲಿಲ್ಲ. ನಗರದ ಹಲವಾರು ಕಡೆ ಒಳಚರಂಡಿ ವ್ಯವಸ್ಥೆಯ ಪುನರ್ ನಿರ್ಮಾಣಗೊಂಡಿದ್ದು, ಒಳಚರಂಡಿ ಜಾಲವನ್ನು ಸಂಪೂರ್ಣವಾಗಿ ಪುನರ್ ನಿರ್ಮಾಣ ಮಾಡುವ ಉದ್ದೇಶ ದಿಂದ 195 ಕೋಟಿ ರೂ. ಮೊತ್ತದ ಎಡಿಬಿ ಎರಡನೆ ಯೋಜನೆನ್ನು ನಗರಕ್ಕೆ ತರುವಲ್ಲಿ ಯಶಸ್ವಿಯನ್ನು ಕಂಡಿದ್ದಾರೆ. 24x7 ಮಾದರಿಲ್ಲಿ ನೀರು ಸರಬರಾಜು ಮಾಜಲು ಸುಮಾರು 218 ಕೋಟಿ ರೂ ಎಡಿಬಿ ಯೋಜನೆಯನ್ನು ತರಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ತುಂಬೆಯ ಕಿಂಡಿ ಅಣೆಕಟ್ಟು ಎತ್ತರಿಸಿ 6 ಮೀಟರ್‌ವರೆಗೆ ನೀರು ನಿಲುಗಡೆ ಮಾಡಿ ನೀರಿನ ಕೊರತೆ ಆಗದಂತೆ ಯಶಸ್ವಿಯಾಗಿದ್ದಾರೆ. ಶಾಸಕರು ಶೇ. 60ರಷ್ಟು ರಸ್ತೆಗಲಿಗೆ ಈಗಾಗಲೇ ಪುಟ್‌ಪಾತ್ ನಿರ್ಮಾಣಕ್ಕೆ ಪ್ರಯತ್ನಿಸಿದ್ದು, ಉಳಿದ ರಸ್ತೆಗಳ ಪುಟ್‌ಪಾತ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಬೀದಿ ಬದಿ ವ್ಯಾಪಾರಸ್ಥರಿಗೆ ಸರ್ವಿಸ್ ಬಸ್ಸು ನಿಲ್ದಾಣದ ಬಳಿ ವ್ಯವಸ್ತೆ ಕಲ್ಪಿಸಿದಾಗ ಬಿಜೆಪಿ ಪಕ್ಷದ ರೂಪಾ ಡಿ. ಬಂಗೇರ ಸಹಿತ ಎಲ್ಲ ಸದಸ್ಯರು ನಿರ್ಣಯಕ್ಕೆ ಸಮ್ಮತಿಸಿದ್ದರು. ಆ ಸಂದರ್ಭ ಇಲ್ಲದ ಆಕ್ಷೇಪ ಈಗೇಕೆ. ಕದ್ರಿ ಪಾರ್ಕ್ ರೂಪಾಡಿ. ಬಂಗೇರ ಅವರ ವಾರ್ಡ್‌ಗೆ ಸೇರಿದ್ದು. ಅವರ ಎರಡು ಅವಧಿಲ್ಲಿ ಇದು ಮರುಭೂಮಿಯಂತೆ ಇತ್ತು. ಶಾಸಕರು ವಿಶೇಷ ಅನುದಾನ ತರಿಸಿ ಅದನ್ನು ಅಭಿವೃದ್ಧಿ ಪಡಿಸಿದ್ದಾರೆ. ಮನಪಾ ಹಾಗೂ ರಾಜ್ಯದಲ್ಲಿ 2008ರಿಂದ 2013ರವರೆಗೆ ಬಿಎಪಿ ಪಕ್ಷ ಆಡಳಿತದಲ್ಲಿದ್ದ ವೇಳೆ ಪುಟಾಣಿ ರೈಲು ಸ್ಥಗಿತಗೊಂಡಿತ್ತು. ಶಾಸಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ.ಇಂದ ಸುಮಾರು 2 ಕೋಟಿ ರೂ. ಅನುದಾನದ ತಂದು ಪುಟಾಣಿ ರೈಲನ್ನು ಮತ್ತು ಹಳಿಯನ್ನು ಅಭಿವೃದ್ಧಿಪಡಿಸಿದ್ದಾರೆ. ರೈಲ್ವೇ ಇಲಾಖೆಯಿಂದ ಸುರಕ್ಷತೆ ಬಗ್ಗೆ ಪ್ರಮಾಣ ಪತ್ರಕ್ಕಾಗಿ ಎದುರು ನೋಡಲಾಗುತ್ತಿದೆ. ಇದು ಸ್ಥಳೀಯ ಕಾರ್ಪೊರೇಟರ್‌ಗೆ ಮರೆತಂತಿದೆ. ಜಿಂಕೆ ಪಾರ್ಕ್ ಮರುಭೂಮಿಯಾಇದ್ದು, ಯಾವದು ಕಾಳಜಿ ತೋರಿಸದ ಸ್ಥಳೀಯ ಕಾರ್ಪೊರೇಟರ್, ಶಾಸಕರು ಇದಕ್ಕೆ ಆರು ಕೋಟಿ ರೂ. ವಿಶೇಷ ಅನುದಾನ ತರಿಸಿ ಸಂಗೀತ ಕಾರಂಜಿ ಮಾಡಿದ್ದಾರೆ. ಬಿಜೆಪಿ ಅವಧಿಯಲ್ಲಿ ಹಳೆ ಬಂದರಿನಿಂದ ಲಕ್ಷದ್ವೀಪಕ್ಕೆ ಇದ್ದ ಶೇ. 80 ವ್ಯಾಪಾರ ವಹಿವಾಟು ಕೇರಳದ ಕೊಚ್ಚಿನ್‌ಗೆ ವರ್ಗಾವಣೆಯಾಗಿತ್ತು. ಅದನ್ನು ವಾಪಾಸು ತರಿಸಲು ಶಾಸಕರ ನಿಯೋಗ ಅಲ್ಲಿಗೆ ಹೋಗಿ ತ್ತೆ ಮಂಗಳೂರು ಬಂದರಿಗೆ ತರಲು ಯಶಸ್ವಿಯಾಗಿದ್ದಾರೆ. ಶಾಸಕರು ತಮ್ಮ ಪುಸ್ತಕದಲ್ಲಿ ಮಂಗಳೂರಿನ ಭವಿಷ್ಯ ನಿರ್ಮಾಣ ಮಾಡಲು ಅವರ ಚಿಂನತೆ ಏನೆಂಬುದನ್ನು ಹೇಳಿದ್ದಾರೆ. ಯಾವುದೇ ಒಬ್ಬ ಜನಪ್ರತಿನಿಧಿಗೆ ಅವರ ಕ್ಷೇತ್ರದ ಮುಂದಿನ ಅಭಿವೃದ್ದಿ ಬಗ್ಗೆ ಚಿಂತನೆ ಬಗೇಕಾಗಿದೆ ಮತ್ತು ನೀಲಿನಕಾಸೆ ತಯಾರಿಸಬೇಕಾಗಿದೆ. ಶಾಸಕರ ಪುಸ್ತಕ ಅಭಿವೃದ್ದಿಗೆ ಹಿಡಿದ ಕೈಗನ್ನಡಿ ಎಂಬುದನ್ನು ಮತದಾರರು ಅರಿತಿದ್ದಾರೆ. ಕೋಮುವಾದಿ ಕನ್ನಡಕ ಇಟ್ಟುಕೊಂಡವರಿಗೆ ಇದು ಅರ್ಥವಾಗುದಿಲ್ಲ ಎಂದು ವಿನಯ ರಾಜ್ ಹೇಳಿದರು.
ಗೋಷ್ಠಿಯಲ್ಲಿ ಪ್ರವೀಣ್ ಚಂದ್ರ ಆಳ್ವ, ಸುಧೀರ್ ಟಿ.ಕೆ., ಮೆರಿಲ್ ರೇಗೋ ಉಪಸ್ಥಿತರಿದ್ದರು.







