ವೃತ್ತಿಗೂ ಪ್ರವೃತ್ತಿಗೂ ಸಮಾನವಾಗಿ ಸಮಯ ನಿರ್ವಹಿಸಿ : ಡಾ. ದಿಶಾ ದಿನಕರ ಕರೆ
‘ಯೆನ್ ಸ್ಲ್ಯಾಶ್ -2018’ ತಾಂತ್ರಿಕ ಸಾಂಸ್ಕೃತಿಕ ಹಬ್ಬ
ಮೂಡುಬಿದಿರೆ, ಮೇ 3: ವೃತ್ತಿಗೂ ಪ್ರವೃತ್ತಿಗೂ ಸಮಾನವಾಗಿ ಸಮಯ ನಿರ್ವಹಣೆ ಮಾಡಲು ತಿಳಿದವರು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾರೆ ಆ ಮೂಲಕವಾಗಿ ಸಮಾಜದಲ್ಲಿ ಯಶಸ್ಸು ಸಾಧಿಸುತ್ತಾರೆ’ ಸಮಯವಿಲ್ಲ ಎಂದು ನೆವನ ಹೇಳುವವರಿಗೆ ಸಾಧನೆ ಅಸಾಧ್ಯವೆಂದು ಒಮೆಗಾ ಆಸ್ಪತ್ರೆಯ ವೈದ್ಯೆ, ಸಿನಿಮಾ ನಟಿ ಡಾ. ದಿಶಾ ದಿನಕರ ಹೇಳಿದರು.
ತೋಡಾರ್‌ನಲ್ಲಿರುವ ಯೆನೆಪೋಯಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಗುರುವಾರದಿಂದ ಮೊದಲ್ಗೊಂಡು ಶನಿವಾರದ ವರೆಗೆ ನಡೆಯಲಿರುವ ‘ಯೆನ್ ಸ್ಲ್ಯಾಶ್’ -ಕಾಲೇಜಿನ ವಿವಿಧ ವಿಭಾಗಗಳ ನಡುವಿನ ತಾಂತ್ರಿಕ ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಯ ಸಿಕ್ಕಾಗ ಪ್ರವೃತ್ತಿ ಯನ್ನರಳಿಸಲು ಸಮಯ ಹೊಂದಿಸಿಕೊಳ್ಳಿರಿ, ಯಾವುದೇ ಕಾರಣಕ್ಕೂ ಪ್ರಯತ್ನವನ್ನು ಅರ್ಧಕ್ಕೆ ಬಿಟ್ಟುಬಿಡದಿರಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಆರ್. ಜಿ. ಡಿ’ ಸೋಜ ಅವರು ಮನುಷ್ಯ ಮೊದಲಾಗಿ ಮಾನವೀಯ ಸಂಬಂಧಗಳು, ಕುಟುಂಬ ದೊಳಗಿನ ಆತ್ಮೀಯತೆಯ ಸುಖವನ್ನು ಅನುಭವಿಸುವಲ್ಲಿ ಹಿಂದೆ ಬೀಳಬಾರದು’ ಎಂದರು. ಆಡಳಿತಾಧಿಕಾರಿ ಅಶೋಕ ಶೆಟ್ಟಿ, ಯೆನ್ ಸ್ಲ್ಯಾಶ್ ಸಂಘಟನಾ ಕಾರ್ಯದರ್ಶಿಗಳಾದ ಅಕಾಶ್ ತಿಮ್ಮಯ್ಯ, ಮೇಘಾ ಉಪಸ್ಥಿತರಿದ್ದರು. ಸುಜನಾ ಸ್ವಾಗತಿಸಿದರು. ಫೌಝಿಯಾ ಪರ್ವೀನ್ ನಿರೂಪಿಸಿದರು. ಸ್ಟೀವನ್ ವಂದಿಸಿದರು.





