ಅಹ್ಮದಾಬಾದ್: ಇಸ್ರೋ ಸಂಶೋಧನಾ ಕೇಂದ್ರದಲ್ಲಿ ಬೆಂಕಿ ಅನಾಹುತ

ಅಹ್ಮದಾಬಾದ್, ಮೇ 3: ಇಸ್ರೋದ ಸಂಶೋಧನಾ ಕೇಂದ್ರದಲ್ಲಿ ಗುರುವಾರ ಮಧ್ಯಾಹ್ನ ಭಾರೀ ಅಗ್ನಿ ದುರಂತ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೋದ ಸ್ಪೇಸ್ ಅಪ್ಲಿಕೇಷನ್ ಸೆಂಟರ್(ಸಿಎಸಿ)ಯ ಒಳಗಡೆ ಗುರುವಾರ ಮಧ್ಯಾಹ್ನ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ಅಗ್ನಿಶಾಮಕದ ದಳದ 25 ವಾಹನಗಳನ್ನು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಬಳಸಲಾಗಿದೆ ಎಂದು ಅಗ್ನಿಶಾಮಕ ದಳದ ಹೆಚ್ಚುವರಿ ಮುಖ್ಯಾಧಿಕಾರಿ ರಾಜೇಶ್ ಭಟ್ ತಿಳಿಸಿದ್ದಾರೆ. ಅಹ್ಮದಾಬಾದ್ ಜಿಲ್ಲಾಧಿಕಾರಿ ವಿಕ್ರಾಂತ್ ಪಾಂಡೆ ಅವರೂ ಘಟನಾ ಸ್ಥಳಕ್ಕೆ ಧಾವಿಸಿದ್ದು ಬೆಂಕಿಯ ಕೆನ್ನಾಲಗೆ ಇಸ್ರೋ ಸಂಶೋಧನಾ ಕೇಂದ್ರವನ್ನು ಆವರಿಸಿದೆ. ಆದರೆ ಬೆಂಕಿ ಹರಡದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ . ಹಲವು ತಂಡಗಳು ಸ್ಥಳದಲ್ಲಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ನೆರವಾಗಿವೆ ಎಂದು ಅವರು ತಿಳಿಸಿದ್ದಾರೆ.
Next Story





