Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕಳಸಾಪುರ ಗ್ರಾಮದಲ್ಲಿ ರೈತರ ಸಮಸ್ಯೆ...

ಕಳಸಾಪುರ ಗ್ರಾಮದಲ್ಲಿ ರೈತರ ಸಮಸ್ಯೆ ಆಲಿಸಿದ ಪ್ರಕಾಶ್ ರೈ

ವಾರ್ತಾಭಾರತಿವಾರ್ತಾಭಾರತಿ3 May 2018 9:49 PM IST
share
ಕಳಸಾಪುರ ಗ್ರಾಮದಲ್ಲಿ ರೈತರ ಸಮಸ್ಯೆ ಆಲಿಸಿದ ಪ್ರಕಾಶ್ ರೈ

ಚಿಕ್ಕಮಗಳೂರು, ಮೇ 3: ಕರಗಡ ಯೋಜನೆ ಬಗ್ಗೆ ಸ್ಥಳೀಯ ರೈತರು ಒಂದು ರೂಪು ರೇಷೆ ತಯಾರು ಮಾಡಿ. ಜೂನ್ ನಿಂದ ನಿರಂತರವಾಗಿ ಚಳವಳಿ ಕೂರೋಣ. ಒಂದು ವರ್ಷದಲ್ಲಿ ನಿಮ್ಮ ಸಮಸ್ಯೆ ಏಕೆ ಪರಿಹಾರ ಆಗುವುದಿಲ್ಲ ನೋಡೋಣ ಎಂದು ಚಿತ್ರ ನಟ ಪ್ರಕಾಶ್ ರೈ ಆ ಭಾಗದ ರೈತರಿಗೆ ಆತ್ಮ ಸ್ಥೈರ್ಯ ತುಂಬಿದರು.

ಬೆಳವಾಡಿ ದೊಡ್ಡಕೆರೆ ವೀಕ್ಷಣೆ ಮಾಡಿದ ರೈ ಗುರುವಾರ ಕಳಸಾಪುರದ ಸಿದ್ದಲಿಂಗೇಗೌಡ ಅವರ ಮನೆಯಲ್ಲಿ ರೈತರಿಂದ ಸಮಸ್ಯೆ ಆಲಿಸಿದರು. ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಬಂದಿಲ್ಲ. ಇಲ್ಲಿಯ ಸಮಸ್ಯೆ ಏನು ಎಂದು ತಿಳಿಯಲು ಆಗಮಿಸಿದ್ದೇನೆ. ಚುನಾವಣೆ ಮುಗಿದ ನಂತರ ಕರಗಡ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಸಂಬಂಧ ನೀವೊಂದು ರೂಪುರೇಷೆ ತಯಾರು ಮಾಡಿ. ಮೇ.30 ರತನಕ ನಿಮಗೆ ಕಾಲಾವಕಾಶವಿದೆ. ಜೂನ್ ಮೊದಲನೆ ವಾರದಲ್ಲಿ ನಾನು ಇಲ್ಲಿಗೆ ಬರುತ್ತೇನೆ. ಅದಕ್ಕೂ ಮುನ್ನ ಈ ಸಮಸ್ಯೆ ಅರಿವಿರುವ ವಿನೋದ್ ನಾಯ್ಕ ಎಂಬವರು ತಜ್ಞರೊಂದಿಗೆ ಇಲ್ಲಿಗಾಗಮಿಸಿ ಚರ್ಚೆ ನಡೆಸಲಿದ್ದಾರೆ. ನಂತರ ಎಲ್ಲರೂ  ಜೂನನಿಂದ ಹೋರಾಟ ಆರಂಭಿಸೋಣ ಅದೇಗೆ ಸಮಸ್ಯೆ ಪರಿಹಾರವಾವುದಿಲ್ಲ ನೋಡೋಣ ಎಂದು ಹೇಳಿದರು.

ಇಷ್ಟೊಂದು ವರ್ಷ ಕಳೆದುಹೋದರು ಒಂದು ನೀರಾವರಿ ಯೋಜನೆ ಫಲಪ್ರದವಾಗಿಲ್ಲ ಎಂದರೆ ಇಲ್ಲಿನ ಸಂಸದರು, ಶಾಸಕರು ಏನು ಮಾಡಿದ್ದಾರೆ ಎಂಬುದು ನನಗಂತು ಗೊತ್ತಿಲ್ಲ. ಅವರನ್ನು ಮೊದಲು ಮನೆಗೆ ಕಳುಹಿಸಿ. ನಿಮ್ಮ ಆಶ್ವಾಸನೆಗಳು ನಮಗೆ ಬೇಡ. ನಾವು ನಂಬುವ ಸ್ಥಿತಿಯಲ್ಲಿಲ್ಲ ಮೊದಲು ಹೊರಡಿ ಎನ್ನಿ. ಹೊಸಬರಿಗೆ ನಿನಗೊಂದು ಅವಕಾಶ ನೀಡಿದ್ದೇವೆ ನೀನಾದರೂ ಜನಪರವಾಗಿ ಕೆಲಸ ಮಾಡು ಎಂದು ಹೇಳಿ. ಜನ ಪ್ರಶ್ನೆ ಮಾಡುವಂತಾಗಬೇಕು. ಸಂಘಟನಾತ್ಮಕವಾಗಿ ಒಗ್ಗೂಡಬೇಕು. ಕಾನೂನು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಹಕ್ಕೇ ನಮಗೆ ಗೊತ್ತಿಲ್ಲದ ಹಾಗೆ ಮಾಡುತ್ತಾರೆ. ರೈತರನ್ನು ಸಾಲಗಾರರನ್ನಾಗಿ ಮಾಡಬಾರದು. ಬೇಕಿದ್ದರೆ ಸರಕಾರ ಸಾಲಗಾರನಾಗಿ ರೈತರ ಅಭಿವೃದ್ಧಿ ಪಡಿಸಲಿ ಎಂದರು. 

ಪ್ರಕೃತಿ ಮುನಿಸಿಕೊಳ್ಳದೆ ಮಳೆ ಬರಲಿ. ಒಂದು ವೇಳೆ ಮಳೆ ಬಾರದೆ ಹೋದಲ್ಲಿ ಪರ್ಯಾಯ ಬದುಕಿಗೆ ಏನು ಮಾಡಬೇಕು. ಯುವಕರ ವಲಸೆ ತಪ್ಪಿಸುವುದು ಹೇಗೆ, ಕಡಿಮೆ ಅವಯ ಬೆಳೆ ಬೆಳೆಯಲು ಸಾಧ್ಯವೇ ? ಎಂದು ಕೂತು ತಜ್ಞರೊಂದಿಗೆ ಆಲೋಚಿಸೋಣ. ನಮ್ಮ ಸಮಸ್ಯೆಗಳನ್ನು ಯಾವ ರಾಜಕೀಯ ಪಕ್ಷಗಳು ಬಗೆಹರಿಸಲಾರವು. ನಾವೇ ಪರಿಹಾರ ಕಂಡುಕೊಳ್ಳಬೇಕು. ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ ಹೋರಾಟಕ್ಕೆ ಮುಂದಡಿ ಇಡೋಣ ಎಂದು ಹೇಳಿದರು.

ಕರಗಡ ಹೋರಾಟ ಸಮಿತಿಯ ಸಂಚಾಲಕರಾದ ಗುರುಶಾಂತಪ್ಪ, ಬಿ.ಅಮ್ಜದ್, ಸ್ಥಳೀಯ ಮುಖಂಡ ಡಾ.ವಿನಾಯಕ ಮತ್ತಿತರೆ ರೈತರು ಕರಗಡ ಯೋಜನೆ ಬಗ್ಗೆ ಮಾಹಿತಿ ನೀಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X