ತಮಿಳುನಾಡಿಗೆ ನೀರು ಹರಿಸಿದರೆ ಉಗ್ರ ಹೋರಾಟ : ದರ್ಶನ್ ಪುಟ್ಟಣ್ಣಯ್ಯ

ಮಂಡ್ಯ, ಮೇ 3: ಪ್ರಸಕ್ತ ಸನ್ನಿವೇಶದಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಒಂದು ವೇಳೆ ನೀರು ಹರಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮೇಲುಕೋಟೆ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ಹಾಗೂ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರು ಪುತ್ರ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ಆದೇಶಕ್ಕೆ ಗುರುವಾರ ಪಾಂಡವಪುರದಲ್ಲಿ ಪ್ರತಿಕ್ರಿಯಿಸಿದ ಅವರು, ನಮಗೆ ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದೇವೆ. ಬೆಳೆಗಳಿಗೆ ನೀರು ಬಿಡಲು ಹೋರಾಡಡುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನೀರು ಬಿಡಲು ಸಾಧ್ಯವೆ ಎಂದು ಕಿಡಿಕಾರಿದರು.
ಕೆಆರ್ ಎಸ್ ಜಲಾಶಯದಲ್ಲಿ ಕೇವಲ 72 ಅಡಿ ಮಾತ್ರ ನೀರಿದ್ದು, ಇದರಲ್ಲಿ ಮೂರು ಮುಕ್ಕಾಲು ಟಿಎಂಸಿ ನೀರು ಮಾತ್ರ ಯೋಗ್ಯವಾದ ನೀರು, ಡೆಡ್ ಸ್ಟೋರೇಜ್ ಸೇರಿ 7 ಟಿಎಂಸಿ ಅಡಿ ನೀರಿದೆ. ಜೂನ್ ತಿಂಗಳವರೆಗೆ ಜನಜಾನುವಾರುಗಳಿಗೆ ಕುಡಿಯಲು ಬೇಕು ಎಂದು ಅವರು ಹೇಳಿದ್ದಾರೆ.
Next Story





