ಇಸ್ರೇಲ್ ಸೈನಿಕರ ಗುಂಡೇಟಿನಿಂದ ಗಾಯಗೊಂಡಿದ್ದ ಯುವಕ ಸಾವು
ಸಗಾಝಾ ಸಿಟಿ, ಮೇ 3: ಗಾಝಾ ಗಡಿಯಲ್ಲಿ ಕಳೆದ ವಾರ ನಡೆದ ಪ್ರತಿಭಟನೆಯ ವೇಳೆ ಇಸ್ರೇಲ್ ಸೈನಿಕರ ಗುಂಡೇಟಿನಿಂದ ಗಾಯಗೊಂಡಿದ್ದ 19 ವರ್ಷದ ಫೆಲೆಸ್ತೀನ್ ಯುವಕ ಗುರುವಾರ ಕೊನೆಯುಸಿರೆಳೆದಿದ್ದಾರೆ ಎಂದು ಗಾಝಾ ಪಟ್ಟಿಯ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದರೊಂದಿಗೆ ಗಾಝಾ ಗಡಿಯಲ್ಲಿ ಮಾರ್ಚ್ 30ರಂದು ಪ್ರತಿಭಟನೆಗಳು ಆರಂಭವಾದಂದಿನಿಂದ ಇಸ್ರೇಲ್ ಸೈನಿಕರು ನಡೆಸಿದ ಗೋಲಿಬಾರುಗಳಲ್ಲಿ ಮೃತಪಟ್ಟ ಫೆಲೆಸ್ತೀನೀಯರ ಸಂಖ್ಯೆ 49ಕ್ಕೆ ಏರಿದೆ.
Next Story





