ಸುಳ್ಳು ಮಾಹಿತಿ : ಪತ್ರಕರ್ತನ ವಿರುದ್ಧ ಪ್ರಕರಣ ದಾಖಲು

ಹೊಸದಿಲ್ಲಿ, ಮೇ 3: ರಾಷ್ಟ್ರೀಯ ಮಹತ್ವದ ‘ಅತ್ಯಂತ ಸೂಕ್ಷ್ಮ’ ಪ್ರದೇಶಗಳಿಗೆ ಪ್ರವೇಶ ಪಡೆಯಲು ಹಾಗೂ ಸಂಶಯಾಸ್ಪದ ಆರ್ಥಿಕ ವ್ಯವಹಾರ ನಡೆಸುವ ಉದ್ದೇಶದಿಂದ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಹಿರಿಯ ಪತ್ರಕರ್ತ ಉಪೇಂದರ್ ರಾಯ್ ಹಾಗೂ ‘ಏರ್ ವನ್ ಏವಿಯೇಷನ್ ’ ಸಂಸ್ಥೆಯ ಅಧಿಕಾರಿಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಖ್ಯಾತ ಮಾಧ್ಯಮ ಸಂಸ್ಥೆಯ ಜೊತೆ ಕಾರ್ಯನಿರ್ವಹಿಸುತ್ತಿರುವ ಉಪೇಂದರ್ ರಾಯ್ ಹಾಗೂ ಏರ್ ವನ್ ಏವಿಯೇಷನ್ ಸಂಸ್ಥೆಯ ಮುಖ್ಯ ಅಧಿಕಾರಿ ಪ್ರಸೂನ್ ರಾಯ್ ಸುಳ್ಳು ಮಾಹಿತಿ ನೀಡಿ ವಿಮಾನ ನಿಲ್ದಾಣದಂತಹ ರಾಷ್ಟ್ರೀಯ ಮಹತ್ವದ ಸ್ಥಳಗಳಿಗೆ ಪ್ರವೇಶ ಪಡೆದಿದ್ದರು. ಅಲ್ಲದೆ ಸಂಶಯಾಸ್ಪದ ಆರ್ಥಿಕ ವ್ಯವಹಾರ ನಡೆಸಿದ್ದಾರೆ . ಈ ಹಿನ್ನೆಲೆಯಲ್ಲಿ ದಿಲ್ಲಿ, ನೋಯ್ಡೆ, ಲಕ್ನೊ ಹಾಗೂ ಮುಂಬೈಯ ಎಂಟು ಪ್ರದೇಶಗಳಲ್ಲಿ ಶೋಧ ನಡೆಸಲಾಗಿದೆ . ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ವಿಚಾರಣೆ ನಡೆಸಲಾಗಿದೆ ಎಂದು ಸಿಬಿಐ ತಿಳಿಸಿದೆ.
Next Story





