Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಾನವನ ತೊಡೆ ಮೂಳೆಯ ಕಠಾರಿ!

ಮಾನವನ ತೊಡೆ ಮೂಳೆಯ ಕಠಾರಿ!

ಪ್ರಪಂಚೋದ್ಯ

*ವಿಸ್ಮಯ*ವಿಸ್ಮಯ3 May 2018 11:59 PM IST
share
ಮಾನವನ ತೊಡೆ ಮೂಳೆಯ ಕಠಾರಿ!

ನ್ಯೂ ಗಿನಿಯಾದ ಯೋಧರು ತಮ್ಮ ಮೃತಪಟ್ಟ ತಂದೆಯ ತೊಡೆ ಮೂಳೆಗಳನ್ನು ಸಂಗ್ರಹಿಸಿ ಆಭರಣಗಳನ್ನು ಮಾತ್ರ ತಯಾರಿಸುತ್ತಿರಲಿಲ್ಲ. ಬದಲಾಗಿ ಕಠಾರಿಗಳನ್ನು ಕೂಡ ತಯಾರಿಸುತ್ತಿದ್ದರು ಎಂಬುದು ಈಗ ಬೆಳಕಿಗೆ ಬಂದಿದೆ.

ಹೇರಳವಾಗಿ ಸಿಗುವ ಹಾಗೂ ಸುಲಭವಾಗಿ ಹಿಡಿದು ಕೊಲ್ಲಬಹುದಾದ ಹಾರಲು ಸಾಧ್ಯವಿಲ್ಲದ ಕ್ಯಾಸ್ಸೋವಾರಿಸ್ ಎಂದು ಕರೆಯಲಾಗುವ ಹಕ್ಕಿಯ ಮೊಣಕಾಲಿನ ಎಲುಬಿನಿಂದ ಅಪಾಯಕಾರಿ ಕಠಾರಿಗಳನ್ನು ತಯಾರಿಸುವ ಸಾಧ್ಯತೆ ಇರುವಾಗ ಮಾನವ ಮೂಳೆಗಳನ್ನು ಬಳಸುವ ಅಗತ್ಯತೆ ಏನಿತ್ತು? ಎಂಬ ಪ್ರಶ್ನೆ ತಜ್ಞರಿಗೆ ಮೂಡಿತ್ತು. ಮೂಳೆಯ ಒರಟುತನ ಹಾಗೂ ಸಾಂಕೇತಿಕತೆ ಮಾನವ ಮೂಳೆಯ ಬಗ್ಗೆ ಒಲವು ಹೊಂದಲು ಕಾರಣವಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.
ಬುಧವಾರ ಅಂತ್ಯಗೊಂಡ ವಿಶೇಷ ಅಧ್ಯಯನ ಕಠಾರಿ ತಯಾರಿಕೆಗೆ ಮಾನವನ ತೊಡೆ ಮೂಳೆ ಸೂಕ್ತವಾದ ವಸ್ತುವಲ್ಲ. ಆದರೆ, ಇದು ಗೌರವದ ಸಂಕೇತ ಎಂದು ಹೇಳಿದೆ. ಹಕ್ಕಿಯ ಎಲುಬಿನಿಂದ ತಯಾರಿಸುವ ಕಠಾರಿಗಿಂತ ಮಾನವನ ತೊಡೆಯ ಮೂಳೆಯಿಂದ ತಯಾರಿಸುವ ಕಠಾರಿಯ ವಿನ್ಯಾಸ ವಿಭಿನ್ನವಾಗಿರುತ್ತದೆ ಎಂದು ಜರ್ನಲ್ ರಾಯಲ್ ಸೊಸೈಟಿ ಓಪನ್ ಸಯನ್ಸ್‌ನಲ್ಲಿ ಪ್ರಕಟವಾದ ಪ್ರಬಂಧದ ಸಹ ಲೇಖಕರಾಗಿರುವ ಅಮೆರಿಕದ ಡಾರ್ಟ್‌ವೌತ್ ಕಾಲೇಜಿನ ನಥಾನಿಯಲ್ ಡೊಮಿನಿ ಹೇಳಿದ್ದಾರೆ.
 ಡೊಮಿನಿ ತಂಡ ಕ್ಯಾಸ್ಸೋವಾರಿಸ್ ಹಕ್ಕಿಯ ಮೊಣಕಾಲಿನ ಮೂಳೆ ಹಾಗೂ ಮಾನವನ ತೊಡೆಯ ಮೂಳೆಯ ಸಾಮರ್ಥ್ಯವನ್ನು ಹೋಲಿಕೆ ಮಾಡಿದೆ ಹಾಗೂ ಇದೆರೆಡರ ಸಾಮರ್ಥ್ಯ ಸಮಾನವಾಗಿದೆ. ಆದುದರಿಂದ ಈ ಎರಡೂ ಎಲುಬುಗಳೂ ಕಠಾರಿ ತಯಾರಿಸಲು ಉತ್ತಮವಾಗಿದೆ. ಆದರೆ, ಮಾನವ ಮೂಳೆಯ ಕಠಾರಿಯ ಮೇಲಿನ ವಿನ್ಯಾಸ ಬಹುಕಾಲ ಉಳಿಯುತ್ತದೆ ಎಂದು ತಂಡ ಹೇಳಿದೆ.
ಮಾನವ ಮೂಳೆ ಬಲಿಷ್ಠವಾಗಿದೆ. ಅದರ ಆಕಾರ ಸ್ವಲ್ಪ ವಕ್ರವಾಗಿರುವುದೇ ಇದಕ್ಕೆ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ. ‘‘ಈ ವಕ್ರತೆಯ ಕಾರಣದಿಂದ ಮಾನವ ಮೂಳೆಯ ಕಠಾರಿ ಹೋರಾಟದ ಸಂದರ್ಭ ತುಂಡಾಗುವ ಸಾಧ್ಯತೆ ತುಂಬಾ ಕಡಿಮೆ. ಅಲ್ಲದೆ ವ್ಯಕ್ತಿ ಮಾನವ ಮೂಳೆಯಿಂದ ಮಾಡಿದ ಕಠಾರಿಯನ್ನು ತುಂಡಾಗದಂತೆ ಕಾಪಾಡಿಕೊಳ್ಳುತ್ತಾನೆ. ಯಾಕೆಂದರೆ ಆ ಕಠಾರಿ ತಂದೆಯ ಎಲುಬಿನಿಂದ ಮಾಡಲಾಗಿದೆ ಹಾಗೂ ಅದಕ್ಕೆ ಸಾಮಾಜಿಕ ಗೌರವ ಇದೆ.’’ ಎಂದು ಅವರು ಹೇಳಿದ್ದಾರೆ.

 

share
*ವಿಸ್ಮಯ
*ವಿಸ್ಮಯ
Next Story
X