ಕಾಪು: ಇಬ್ಬರು ಗುತ್ತಿಗೆದಾರರ ಮನೆ, ಕಚೇರಿಗೆ ಐಟಿ ದಾಳಿ

ಕಾಪು, ಮೇ 4: ಕಾಪುವಿನ ಇಬ್ಬರು ಗುತ್ತಿಗೆದಾರರ ಮನೆ, ಕಚೇರಿಯ ಮೇಲೆ ಐಟಿ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದ್ದು, ಸಂಜೆಯವರೆಗೂ ದಾಖಲೆ ಪರಿಶೀಲನೆ ನಡೆಸುತಿದ್ದಾರೆ.
ಇಲ್ಲಿನ ದೇವಿಪ್ರಸಾದ್ ಕನ್‌ಸ್ಟ್ರಕ್ಸನ್‌ನ ವಾಸುದೇವ ಶೆಟ್ಟಿ ಹಾಗೂ ಬ್ರಹ್ಮಲಿಂಗೇಶ್ವರ ಕನ್‌ಸ್ಟ್ರಕ್ಸನ್‌ನ ಕಿಶೋರ್ ಗುರ್ಮೆ ಅವರ ಮನೆ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಆದರೆ ದಾಳಿಯ ವೇಳೆ ವಾಸುದೇವ ಶೆಟ್ಟಿ ಕೆಲಸದ ನಿಮಿತ್ತ ಮುಂಬೈಗೆ ತೆರಳಿದ್ದರು. ಸಂಜೆಯವರೆಗೂ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
Next Story





