ಡಾ.ರವಿಶಂಕರ್‌ಗೆ ಕೇಂದ್ರ ಆಯುಷ್ ಸಚಿವಾಲಯದ ಪ್ರಶಸ್ತಿ

ಉಡುಪಿ, ಮೇ 4: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಸರಕಾರದ ಆಯುಷ್ ಇಲಾಖೆಯ ಕೇಂದ್ರಿಯ ಆಯುರ್ವೇದ ಮತ್ತು ಯುನಾನಿ ಸಂಶೋಧನಾ ಸಂಸ್ಥೆಯ ವಾರ್ಷಿಕ ಸಮಾವೇಶದಲ್ಲಿ ಧರ್ಮಸ್ಥಳ ಮಂಜು ನಾಥೇಶ್ವರ ಆಯುರ್ವೇದ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಬಿ. ರವಿಶಂಕರ್ ಅವರಿಗೆ ಆಯುರ್ವೇದ ಸಂಶೋಧನಾ ವಿಭಾಗದಲ್ಲಿ ಮಾಡಿದ ಸಾಧನೆಗಾಗಿ ಜೀವಮಾನ ಸಾಧನಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಡಾ.ಬಿ.ರವಿಶಂಕರ್ ಸುಮಾರು 25 ವರ್ಷಗಳ ಕಾಲ ಗುಜರಾತ್ ಆಯು ರ್ವೇದ ವಿವಿಯಲ್ಲಿ ಆಯುರ್ವೇದ ಸಂಶೋಧನಾ ನಿರ್ದೇಶಕರಾಗಿ, ನಂತರ ಉಡುಪಿಯ ಎಸ್‌ಡಿಎಂ ಆಯುರ್ವೇದ ಸಂಶೋಧನಾ ವಿಭಾಗದಲ್ಲಿ 10 ವರ್ಷಗಳ ಕಾಲ ನಿರ್ದೇಶಕರಾಗಿ ಆಯುರ್ವೇದ ಸಂಶೋಧನೆಗೆ ಆಗಾದ ಕೊಡುಗೆಯನ್ನು ನೀಡಿದ್ದಾರೆ.
ಈ ಪ್ರಶಸ್ತಿಯನ್ನು ಕೇಂದ್ರ ಆಯುಷ್ ಸಚಿವ ಶ್ರೀಪಾದ್ ಎಸ್ಸೋ ನಾಯ್ಕೋ ಪ್ರದಾನ ಮಾಡಿದರು.
Next Story





