ಬಾಲಕಿಯ ಅತ್ಯಾಚಾರಗೈದು ಜೀವಂತ ದಹಿಸಿದ ದುಷ್ಕರ್ಮಿಗಳು

ಪಾಟ್ನಾ, ಮೇ 4: ಬಾಲಕಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರಗೈದ ದುಷ್ಕರ್ಮಿಗಳು ಆಕೆಯನ್ನು ಜೀವಂತ ದಹಿಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ನಕ್ಸಲ್ ಪೀಡಿತ ಛಾತ್ರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಎಲ್ಲರೂ ಮದುವೆಗೆ ತೆರಳಿದ್ದ ವೇಳೆ ಮನೆಯಲ್ಲಿದ್ದ 14 ಬಾಲಕಿಯನ್ನು ಮದ್ಯಪಾನ ಮಾಡಿದ್ದ ನಾಲ್ವರು ಅಪಹರಿಸಿದ್ದರು. ನಂತರ ಆಕೆಯನ್ನು ಅತ್ಯಾಚಾರಗೈದಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಗ್ರಾಮದ ಮುಖ್ಯಸ್ಥನ ಬಳಿ ಬಾಲಕಿಯ ತಂದೆ ದೂರು ನೀಡಿದ್ದು, ಆರೋಪಿಗಳಿಗೆ 100 ಬಸ್ಕಿ ತೆಗೆಯುವ ಹಾಗು 50 ಸಾವಿರ ರೂ. ದಂಡ ಪಾವತಿಸುವಂತೆ ಹೇಳಲಾಗಿದೆ. ಇದರಿಂದ ಕೋಪಗೊಂಡ ಆರೋಪಿಗಳು ಬಾಲಕಿಯ ತಂದೆ ಹಾಗು ತಾಯಿಗೆ ಹಲ್ಲೆಗೈದು ಆಕೆಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ ಎನ್ನಲಾಗಿದೆ.
Next Story





