ಚುನಾವಣಾ ಪ್ರಚಾರ ಮೊಟಕುಗೊಳಿಸಿ ವಾಪಸ್ ತೆರಳಲಿರುವ ಆದಿತ್ಯನಾಥ್

ಹೊಸದಿಲ್ಲಿ, ಮೇ 4: ಉತ್ತರ ಪ್ರದೇಶದಲ್ಲಿ ಭೀಕರ ಧೂಳು ಬಿರುಗಾಳಿಯಿಂದ 73 ಜನರು ಮೃತಪಟ್ಟಿದ್ದರೆ ಇತ್ತ ಕರ್ನಾಟಕ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿರುವುದಕ್ಕಾಗಿ ವಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ರಾತ್ರಿ ಆದಿತ್ಯನಾಥ್ ಉತ್ತರಪ್ರದೇಶಕ್ಕೆ ಹಿಂದಿರುಗಲಿದ್ದಾರೆ.
ಧೂಳು ಬಿರುಗಾಳಿಯಿಂದ ತತ್ತರಿಸಿರುವ ರಾಜ್ಯದೊಂದಿಗೆ ನಿಲ್ಲುವುದು ಬಿಟ್ಟು ಕರ್ನಾಟಕದಲ್ಲಿ ಪ್ರಚಾರ ನಡೆಸುತ್ತಿರುವ ಆದಿತ್ಯನಾಥ್ ರನ್ನು ಸಿದ್ದರಾಮಯ್ಯ ಟೀಕಿಸಿದ್ದರು.
ಶನಿವಾರದವರೆಗೆ ಆದಿತ್ಯನಾಥ್ ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎನ್ನಲಾಗುತ್ತಿತ್ತು.
Next Story





