100 ವರ್ಷಗಳಾದರೂ ಕಾಂಗ್ರೆಸ್‌ನಿಂದ ಬಡವರಿಗೆ ಇಂದಿರಾ ಕ್ಯಾಂಟಿನೇ ಗತಿ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಮೇ 4: ಕಾಂಗ್ರೆಸ್ ಸರಕಾರ ಜನರಿಗೆ ಉದ್ಯೋಗ, ಶಿಕ್ಷಣ ಸೇರಿದಂತೆ ಮೂಲಭೂತ ಸೌರ್ಕಯಗಳನ್ನು ನೀಡುತ್ತಿದ್ದರೆ ಇಂದು ಇಂದಿರಾ ಕ್ಯಾಂಟಿನ್‌ಗಳ ಅಗತ್ಯವೇ ಇರಲಿಲ್ಲ. ಹೀಗೆ ಕಾಂಗ್ರೆಸ್ ಸರಕಾರ ಅಧಿಕಾರ ದಲ್ಲಿದ್ದರೆ 100ವರ್ಷಗಳು ಕೂಡ ಬಡವರಿಗೆ ಇಂದಿರಾ ಕ್ಯಾಂಟಿನೇ ಗತಿ ಆಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಲಿರುವ ಬಿಜೆಪಿ ಚುನಾ ವಣಾ ಪ್ರಚಾರದ ದಶ ದಿಕ್ಕು ರಥಕ್ಕೆ ಶುಕ್ರವಾರ ಕಡಿಯಾಳಿಯಲ್ಲಿರುವ ಪಕ್ಷದ ಕಚೇರಿ ಮುಂದೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಕಾಂಗ್ರೆಸ್ ಸರಕಾರ ಚುನಾವಣೆ ಹಾಗೂ ರಾಜಕಾರಣಕ್ಕಾಗಿ ಎಲ್ಲವನ್ನು ಮಾಡಿದೆಯೇ ಹೊರತು ಬಡವರಿಗಾಗಿ ಏನನ್ನು ಮಾಡಿಲ್ಲ. ಮರಳುಗಾರಿಕೆ ಸಮಸ್ಯೆಯಿಂದ ಬಡವರು ಕೆಲಸ ಇಲ್ಲದೆ ತೊಂದರೆ ಎದುರಿಸಬೇಕಾಯಿತು. ಇದರಿಂದ ಶೇ.50ರಷ್ಟು ಪ್ರಗತಿ ಸ್ಥಗಿತಗೊಂಡಿತು ಎಂದು ಅವರು ದೂರಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ವಿಠಲ ಶೆಟ್ಟಿಗಾರ್, ಅಚ್ಯುತ ಕಲ್ಮಾಡಿ, ಸೋಮಶೇಖರ್ ಭಟ್, ತೋನ್ಸೆ ದೇವದಾಸ ಪೈ, ಪಾಂಡುರಂಗ ಮಲ್ಪೆ, ಶಾಂತಾ ವಿ.ಆಚಾರ್ಯ, ಗೋಪಾಲ್, ಅಚ್ಯುತ ಆಚಾರ್ಯ, ವಿ. ಸುಂದರ್ ದೇವಾಡಿಗ, ಕೆ.ಟಿ.ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ರಾಘವೇಂದ್ರ ಕಿಣಿ ಸ್ವಾಗತಿಸಿ ಕಾಯರ್ಕ್ರಮ ನಿರೂಪಿಸಿದರು.







