ಮೇ 6: ಎಸ್ಸೆಸ್ಸೆಫ್ ಬೊಳ್ಳಾಯಿ ಶಾಖೆಯಿಂದ ರಕ್ತದಾನ ಶಿಬಿರ
ಬಂಟ್ವಾಳ, ಮೇ 4: ಎಸ್ಸೆಸ್ಸೆಫ್ ದಶಮಾನೋತ್ಸವದ ಪ್ರಯುಕ್ತ ಎಸ್ಸೆಸ್ಸೆಫ್ ಬೊಳ್ಳಾಯಿ ಶಾಖೆ ವತಿಯಿಂದ ಮೇ 6ರಂದು ಬೆಳಿಗ್ಗೆ 9ಕ್ಕೆ ರಕ್ತದಾನ ಶಿಬಿರ, ವಸ್ತ್ರ ವಿತರಣೆ, ಟೈಲರಿಂಗ್ ಮಿಷನ್ ವಿತಣೆ ಹಾಗೂ ಸನ್ಮಾನ ಕಾರ್ಯಕ್ರಮ ಬೊಳ್ಳಾಯಿ ಜಂಕ್ಷನ್‌ನಲ್ಲಿ ನಡೆಯಲಿದೆ.
ಕೊಳಕೆ ಜುಮಾ ಮಸೀದಿಯ ಖತೀಬ್ ಬದ್ರುದ್ದೀನ್ ಅಹ್ಸನಿ ಅಳಕೆ ಅಧ್ಯಕ್ಷತೆ ವಹಿಸುವರು. ಎಸ್ಸೆಸ್ಸೆಫ್ ಪಾಣೆಮಂಗಳೂರು ಘಟಕ ಅಧ್ಯಕ್ಷ ಪಿ.ಎಸ್.ಯಹ್ಯಾ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಎಸ್ಸೆಸ್ಸೆಫ್ ಬಂಟ್ವಾಳ ಘಟಕ ಅಧ್ಯಕ್ಷ ರಶೀದ್ ಹಾಜಿ ವಗ್ಗ ಮುಖ್ಯ ಪ್ರಭಾಷಣ ಮಾಡುವರು. ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ಎಸ್ಸೆಸ್ಸೆಫ್ ಶಾಖಾ ಪ್ರಕಟನೆ ತಿಳಿಸಿದೆ.
Next Story





