ಮೈಸೂರು: 3 ಇಂಜಿನಿಯರ್ ಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

ಮೈಸೂರು,ಮೇ.4: ಲೋಕೋಪಯೋಗಿ ಇಲಾಖೆಯ ಮೂವರು ಇಂಜಿನಿಯರ್ ಗಳ ಮನೆ ಮೇಲೆ ಏಕಕಾಲದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಿನ್ನೆ ರಾತ್ರಿ ಚಾಮರಾಜಪುರಂ ನಲ್ಲಿರುವ, ಚಾಮರಾಜನಗರ ಪಿಡಬ್ಲ್ಯುಡಿ ಇಇ ವಿಜಯಕುಮಾರ್ ಅವರ ಮನೆ, ವಿಜಯಗರದಲ್ಲಿರುವ ಎಇಇ ಗಣೇಶ್ ಮತ್ತು ಸರಸ್ವತಿಪುರಂ ನಲ್ಲಿರುವ ಗುಂಡ್ಲುಪೇಟೆ ಎಇಇ ವಿಜಯಸಾರಥಿ ಅವರ ಮನೆಗಳ ಮೇಲೆ ಏಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಅಪಾರ ಪ್ರಮಾಣದ ನಗದು, ಚಿನ್ನಾಭರಣದೊಂದಿಗೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ತಡರಾತ್ರಿವರೆಗೂ ತಪಾಸಣೆ ನಡೆಸಿ ಆಧಾಯ ತೆರಿಗೆ ಅದಿಕಾರಿಗಳು ಮನೆಯ ಪ್ರತಿಯೊಂದು ಮೂಲೆ ಮೂಲೆಯನ್ನು ಪರಿಶೀಲಸಿದರು, ಈ ವೇಳೆ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
Next Story





