ಮದ್ದೂರು: ಬಿರುಗಾಳಿ ಸಹಿತ ಮಳೆ; ಮನೆ ಮೇಲ್ಚಾವಣಿ, ಬಾಳೆ ಫಸಲು ಹಾನಿ

ಮದ್ದೂರು, ಮೇ 4: ಗುರುವಾರ ತಡರಾತ್ರಿ ಬಂದ ಬಿರುಗಾಳಿ ಸಹಿತ ಸುರಿದ ಮಳೆಗೆ ತಾಲೂಕಿನ ಸಾದೊಳಲು ಗ್ರಾಮದಲ್ಲಿ ಹಲವು ಮನೆಗಳ ಮೇಲ್ಚಾವಣಿಗಳು ಹಾರಿಹೋಗಿದ್ದು, ಬಾಳೆ ಫಸಲು ಹಾನಿಯಾಗಿದೆ.
ಕುಸುಮಾ ರಮೇಶ್ ಎಂಬುವರು ನೂತನವಾಗಿ ಮನೆ ನಿರ್ಮಿಸುತ್ತಿದ್ದ ಮನೆಯ ಮೇಲ್ಭಾಗಕ್ಕೆ ಹಾಕಿದ್ದ ಕಬ್ಬಿಣದ ರಾಡುಗಳು ಹಾಗೂ ಶೀಟುಗಳು ಹಾರಿ ಪಕ್ಕದ ಮಾಲಪ ಅವರ ಮನೆ ಮೇಲೆ ಬಿದ್ದು ಹೆಂಚುಗಳಿಗೆ ಹಾನಿಯಾಗಿವೆ.
ಇದೇ ಗ್ರಾಮದ ದೇವರಸೇಗೌಡರಿಗೆ ಸೇರಿದ್ದ ಬಾಳೆತೋಟದಲ್ಲಿ 4 ಲಕ್ಷ ಹಾಗೂ ಸುಂದರೇಶ್ ಅವರಿಗೆ ಸೇರಿದ್ದ ಬಾಳೆ ತೋಟದಲ್ಲಿ 2 ಲಕ್ಷ ರೂಪಾಯಿ ಮೌಲ್ಯದ ಬಾಳೆ ಫಲಸು ನಷ್ಟವಾಗಿದೆ. ತಾಲೂಕಿನ ಹಲವೆಡೆ ವಿದ್ಯತ್ ಕಂಬಗಳು, ಮರಗಳು ಧರೆಗೆ ಉರುರುವ ಬಗ್ಗೆ ವರದಿಯಾಗಿದೆ.
Next Story





