ಹಜ್ ಯಾತ್ರೆಯ ಕೊನೆಯ ಕಂತು ಪಾವತಿಸಲು ಸೂಚನೆ
ಮಂಗಳೂರು, ಮೇ 4: ಪ್ರಸಕ್ತ ಸಾಲಿನಲ್ಲಿ ಹಜ್ ಯಾತ್ರೆ ಕೈಗೊಳ್ಳುವ ಗ್ರೀನ್ ವಿಭಾಗದ ಯಾತ್ರಾರ್ಥಿಗಳಿಗೆ 2,63,450 ರೂ. ಆಗಿದ್ದು, ಈಗಾಗಲೆ 81,00,000 ರೂ. ಪಾವತಿಸಿದ್ದಾರೆ. ಇನ್ನು ಕೊನೆಯ ಕಂತಿನ 1,82,450 ರೂ. ಪಾವತಿಸಲು ಬಾಕಿ ಇದೆ. ಅಝೀಝಿಯ ವಿಭಾಗಕ್ಕೆ 2,29,250 ರೂ. ಆಗಿದ್ದು, ಈಗಾಗಲೇ 81,00,000 ರೂ. ಪಾವತಿಸಿರುತ್ತಾರೆ. ಕೊನೆಯ ಕಂತಿನ 1,48,250 ರೂ. ಪಾವತಿಸಲು ಬಾಕಿ ಇದೆ.
ಹಣ ಪಾವತಿಸಲು ಬಾಕಿಯಿರುವವರು ಮೇ 23ರೊಳಗೆ ಸಲ್ಲಿಸಬಹುದು ಎಂದು ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಣಾಧಿಕಾರಿ ತಿಳಿಸಿರುತ್ತಾರೆ ಎಂದು ಮಂಗಳೂರು ಹಜ್ ನಿರ್ವಾಹಣಾ ಸಮಿತಿಯ ಅಧ್ಯಕ್ಷ ಹಾಜಿ ಯೆನೆಪೊಯ ಮುಹಮ್ಮದ್ ಕುಂಞಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story