ವಾಹನಗಳಿಗೆ ಉಚಿತ ಪೆಟ್ರೋಲ್ ಹಂಚಿಕೆ: ಕಾಂಗ್ರೆಸ್‌ನ ಸತೀಶ್ ಅಮೀನ್ ವಿರುದ್ಧ ಪ್ರಕರಣ
ಮಲ್ಪೆ, ಮೇ 4: ಉಡುಪಿಯ ರಾಯಲ್ ಗಾರ್ಡನ್‌ನಲ್ಲಿ ಎ.22ರಂದು ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಮಲ್ಪೆಯ ಎರಡು ಪೆಟ್ರೋಲ್ ಬಂಕ್‌ಗಳಲ್ಲಿ ಉಚಿತ ವಾಗಿ ಪೆಟ್ರೋಲ್ ಹಂಚುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆಕೊರನೆಟ್ ಬಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮತ್ತು ಮಲ್ಪೆ-ಉಡುಪಿ ರಸ್ತೆಯಲ್ಲಿರುವ ಭಾವನಾ ಎಂಟರಪ್ರೈಸಸ್ಸ್ ಎಚ್‌ಪಿ ಪೆಟ್ರೋಲ್ ಬಂಕ್‌ಗಳಲ್ಲಿ ಟೋಕನ್ ನೀಡುವವರಿಗೆ 200ರೂ. ಪೆಟ್ರೋಲ್ ಹಂಚುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿರುವುದಾಗಿ ಉಡುಪಿ ಕ್ಷೇತ್ರದ ಪ್ಲೇಯಿಂಗ್ ಸ್ಕ್ವ್ವಾಡ್ ಅಧಿಕಾರಿ ಸುಧೀರ್ ಕುಮಾರ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
Next Story





