ಮಹಿಳೆಯ ದೇಹದಲ್ಲಿ 59 ಕೆ.ಜಿ. ಗಡ್ಡೆ!: 5 ತಾಸುಗಳ ಮ್ಯಾರಥಾನ್ ಶಸ್ತ್ರಚಿಕಿತ್ಸೆ ಯಶಸ್ವಿ

ಸಾಂದರ್ಭಿಕ ಚಿತ್ರ
ವಾಶಿಂಗ್ಟನ್, ಮೇ 4: ಅಮೆರಿಕದ ಕನೆಕ್ಟಿಕ್ ರಾಜ್ಯದ 38 ವರ್ಷದ ಮಹಿಳೆಯೊಬ್ಬರ ಅಂಡಾಶಯದಲ್ಲಿ ಬೆಳೆದಿದ್ದ ಸುಮಾರು 132 ಪೌಂಡ್ ತೂಕದ (ಸುಮಾರು 59 ಕೆ.ಜಿ.) ಗೆಡ್ಡೆಯೊಂದನ್ನು ಐದು ತಾಸುಗಳ ಮ್ಯಾರಥಾನ್ ಶಸ್ತ್ರಚಿಕಿತ್ಸೆ.ಯ ಮೂಲಕ ಹೊರತೆಗೆಯಲಾಗಿದೆಯಂದು ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದ ವೈದ್ಯರು ತಿಳಿಸಿದ್ದಾರೆ.
ಮಹಿಳೆಯ ಇಚ್ಛೆಯಂತೆ ಆಕೆಯ ಹೆಸರನ್ನು ಬಹಿರಂಗಪಡಿಸದಿರುವ ವೈದ್ಯರು, 2017ರ ನವೆಂಬರ್ನಿಂದ ಗಡ್ಡೆಯು ವಾರಕ್ಕೆ ಸರಾಸರಿ 10 ಪೌಂಡ್ನಷ್ಟು ಬೆಳೆಯುತ್ತಿತ್ತೆಂದು ವೈದ್ಯರು ತಿಳಿಸಿದ್ದಾರೆ.
ಫೆಬ್ರವರಿ 14ರಂದು ಕೆನೆಕ್ಟಿಕಟ್ ರಾಜ್ಯದ ಡ್ಯಾನ್ಬರಿ ಆಸ್ಪತ್ರೆಯಲ್ಲಿ ನಡೆದ ಸುದೀರ್ಘ 5 ತಾಸುಗಳ ಶಸ್ತ್ರಕ್ರಿಯೆಯಲ್ಲಿ ಈ ಗಡ್ಡೆಯನ್ನು ಹೊರತೆಗೆಯಲಾಯಿತೆಂದು ಅವರು ಹೇಳಿದ್ದರು. ಸುಮಾರು 12 ಮಂದಿ ವೈದ್ಯರು ಈ ಶಸ್ತ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಶಸ್ತ್ರಕ್ರಿಯೆ ನಡೆದು ಮೂರು ತಿಂಗಳ ಬಳಿಕ ಮಹಿಳೆ ಚೇತರಿಸಿಕೊಂಡಿದ್ದು, ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಆಕೆ ಕರ್ತವ್ಯಕ್ಕೆ ಮರಳಿದ್ದಾರೆಂದು ಅವರು ಹೇಳಿದ್ದಾರೆ.
Next Story





