ಪ್ರೀತಿಸಿ ಮದುವೆಯಾದ ಯುವಕ ಆರು ತಿಂಗಳಿನಿಂದ ನಾಪತ್ತೆ

ಕೋಟ, ಮೇ 4: ಪ್ರೀತಿಸಿ ಮದುವೆಯಾದ ಪತಿ ಕಳೆದ ಆರು ತಿಂಗಳು ಗಳಿಂದ ನಾಪತ್ತೆಯಾಗಿರುವ ಬಗ್ಗೆ ಪತ್ನಿ ನೀಡಿರುವ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣೂರು ಪಡುಕೆರೆಯ ರಂಜಿತಾ (22) ಮತ್ತು ಅಭಿಷೇಕ್(22) ಎಂಬ ವರು ಪರಸ್ಪರ ಪ್ರೀತಿಸಿ 2017ರ ಜು.30ರಂದು ಮದುವೆಯಾಗಿದ್ದು, ಈ ಮದುವೆಗೆ ಅಭಿಷೇಕ್ ಮನೆಯವರ ವಿರೋಧ ವ್ಯಕ್ತಪಡಿಸಿದ್ದರು. ಮದುವೆಯ ನಂತರ ಇವರಿಬ್ಬರು ರಂಜಿತಾರ ತಂದೆಯ ಮನೆಯಲ್ಲಿ ವಾಸವಾಗಿದ್ದು ಅಭಿಷೇಕ್ ಕುಂದಾಪುರದಲ್ಲಿ ಇಲೆಕ್ಟ್ರಿಷಿಯನ್ ಕೆಲಸಕ್ಕೆ ಮಾಡುತ್ತಿದ್ದರು.
ವೈಯಕ್ತಿಕ ಕಾರಣಕ್ಕೆ ವಿಷ ಕುಡಿದು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದ ಅಭಿಷೇಕ್, ತನ್ನನ್ನು ನೋಡಲು ಬಂದ ರಂಜಿತಾಳನ್ನು ಆಸ್ಪತ್ರೆ ಯಲ್ಲಿ ಇರಲು ಬಿಡದೆ ಮನೆಗೆ ಕಳುಹಿಸಿಕೊಟ್ಟಿದ್ದರು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅಭಿಷೇಕ್ ನ.1ರಿಂದ ನಾಪತ್ತೆಯಾಗಿದ್ದು, ಈವರೆಗೆ ಪತ್ತೆಯಾ ಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





