ಅಮೆರಿಕದ ಆಸಂಬದ್ಧ ಆರೋಪ: ಚೀನಾ

ಬೀಜಿಂಗ್,ಮೇ 4: ಡಿಜಿಬೌಟಿ ಸೇನಾ ನೆಲೆಯಲ್ಲಿ ಚೀನಿಯರು, ಅಮೆರಿಕದ ಪೈಲಟ್‌ಗಳ ಮೇಲೆ ಮಿಲಿಟರಿ ದರ್ಜೆಯ ಲೇಸರ್ ಕಿರಣಗಳನ್ನು ಹಾಯಿಸುತ್ತಿದ್ದಾರೆಂಬ ಆರೋಪಗಳನ್ನು ಚೀನಾ ಶುಕ್ರವಾರ ನಿರಾಕರಿಸಿದೆ. ಅಮೆರಿಕದ ಆರೋಪವು ಅಸಂಬದ್ಧವಾದುದೆಂದು ಅದು ಹೇಳಿದೆ.
‘‘ಈ ಆರೋಪವನ್ನು ಜಾಗರೂಕತೆಯಿಂದ ಪರಿಶೀಲಿಸಿದ ಬಳಿಕ ನಾವು, ತಥಾಕಥಿತ ಆರೋಪಗಳು ಸಂಪೂರ್ಣವಾಗಿ ಅಸಂಜಸವಾಗಿದೆಯೆಂದು ನಾವು ಅಮೆರಿಕಕ್ಕೆ ತಿಳಿಸಿದ್ದೇವೆ ’’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
Next Story





