ಅತ್ಯಧಿಕ ವಿಮಾನ ಸಂಚಾರ ದಟ್ಟಣೆ: 9ನೇ ಸ್ಥಾನದಲ್ಲಿ ದುಬೈ-ಕುವೈತ್ ವಾಯುಮಾರ್ಗ

ಲಂಡನ್,ಮೇ 4: ದುಬೈ-ಕುವೈತ್ ವಾಯುಮಾರ್ಗವು ಜಗತ್ತಿನ 20 ಅತ್ಯಧಿಕ ವಿಮಾನ ಸಂಚಾರ ದಟ್ಟಣೆಯ ವಾಯುಮಾರ್ಗಗಳ ಪೈಕಿ ದುಬೈ-ಕುವೈತ್ ವಾಯುಮಾರ್ಗವು 9ನೇ ಸ್ಥಾನವನ್ನು ಪಡೆದಿದೆಯೆಂದು ವಾಯುಯಾನ ಮಾಹಿತಿ ಸಂಸ್ಥೆ ಓಎಜಿ ವರದಿ ತಿಳಿಸಿದೆ.
2017ರ ಮಾರ್ಚ್‌ನಿಂದ ಫೆಬ್ರವರಿ 2018ರವರೆಗೆ ಈ ವಾಯುಮಾರ್ಗವಾಗಿ 15,332 ವಿಮಾನಗಳು ಸಂಚರಿಸಿದ್ದು, 20.70 ಲಕ್ಷಕ್ಕೂ ಅಧಿಕ ಪ್ರಯಾಣಿಕರನ್ನು ಕೊಂಡೊಯ್ದಿದ್ದವು.
ಮಲೇಶ್ಯ ರಾಜಧಾನಿ ಕೌಲಾಲಂಪುರ ಹಾಗೂ ಸಿಂಗಾಪುರ ನಡುವಿನ ವಿಮಾನಯಾನವು ಜಗತ್ತಿನ ಅತ್ಯಂತ ದಟ್ಟನೆಯ ಅಂತಾರಾಷ್ಟ್ರೀಯ ವಿಮಾನ ಮಾರ್ಗವೆನಿಸಿದೆ. ದಿನಕ್ಕೆ ಸರಾಸರಿ 84 ವಿಮಾನಗಳಂತೆ ಒಂದು ವರ್ಷದಲ್ಲಿ ಈ ವಾಯುಮಾರ್ಗದಲ್ಲಿ 30,500ಕ್ಕೂ ಅಧಿಕ ವಿಮಾನಗಳು ಪ್ರಯಾಣಿಸಿದ್ದವೆಂದು ವರದಿಯು ತಿಳಿಸಿದೆ.
ಹಾಂಕಾಂಗ್ ಹಾಗೂ ತೈವಾನ್ ರಾಜಧಾನಿ ತೈಪಿ ನಡುವಿನ ವಿಮಾನ ಮಾರ್ಗವು ಜಗತ್ತಿನ ಎರಡನೆ ಅತ್ಯಧಿಕ ವಿಮಾನಸಂಚಾರ ದಟ್ಟಣೆಯ ವಾಯುಮಾರ್ಗವೆನಿಸಿಗದೆ.2017ರ ಮಾರ್ಚ್‌ನಿಂದ ಫೆಬ್ರವರಿ 2018ರವರೆಗೆ ಈ ವಾಯುಮಾರ್ಗದಲ್ಲಿ 28,887 ವಿಮಾನಗಳು ಸಂಚರಿಸಿದ್ದವು.





