ಮುಲ್ಕಿ: ದೇಶದಾದ್ಯಂತದ ಅತ್ಯಾಚಾರ ವಿರೋಧಿಸಿ ಮುಸ್ಲಿಂ ಐಕ್ಯ ವೇದಿಕೆಯಿಂದ ಪ್ರತಿಭಟನೆ

ಮುಲ್ಕಿ, ಮೇ 4: ಮುಸ್ಲಿಂ ಐಕ್ಯ ವೇದಿಕೆ, ಮುಲ್ಕಿ ಇದರ ನೇತ್ರತ್ವದಲ್ಲಿ ದೇಶದಾದ್ಯಂತ ನಡೆಯುತ್ತಿರುವ ಅತ್ಯಾಚಾರ ಘಟನೆಗಳನ್ನು ಖಂಡಿಸಿ ಕಾರ್ನಾಡು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಮುಲ್ಕಿ ಜಮಾಅತ್ ಅಧ್ಯಕ್ಷರಾದ ಇಕ್ಬಾಲ್ ಅಹ್ಮದ್, ಪಿ ಎಫ್ ಐ ಜಿಲ್ಲಾ ಸಮಿತಿ ಸದಸ್ಯರಾದ್ ಎ.ಕೆ.ಅಶ್ರಾಫ್, ಬಿ.ಎಮ್.ಆಸೀಫ್ ಮಾಜಿ ನಗರಸಭಾ ಸದಸ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ನಾಡು ಮತ್ತು ಮುಲ್ಕಿಯ ಉಸ್ತಾದರುಗಳು ಹಾಗೂ ಸ್ಥಳೀಯ ಸಂಘಟನೆಯ ಅಧ್ಯಕ್ಷರು / ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ತಹಶೀಲ್ದಾ ರರಿಗೆ ಮನವಿ ಸಲ್ಲಿಸಲಾಯಿತು.
Next Story





