ಕೋಲ್ಕತಾ ತಂಡದ ಗೆಲುವಿಗೆ 182 ರನ್‌ಗಳ ಸವಾಲು

ಮುಂಬೈ, ಮೇ 6: ಐಪಿಎಲ್ ಟ್ವೆಂಟಿ-20 ಟೂರ್ನಿಯ 37ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 181 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ತಂಡ ಆರಂಭಿಕ ದಾಂಡಿಗ ಸೂರ್ಯಕುಮಾರ್ ಯಾದವ್ ಅರ್ಧಶತಕದ ನೆರವಿನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
ಸೂರ್ಯಕುಮಾರ್ ಯಾದವ್ 59ರನ್, ಎವಿನ್ ಲೆವಿಸ್ 43ರನ್, ರೋಹಿತ್ ಶರ್ಮಾ 11 ರನ್, ಹಾರ್ದಿಕ್ ಪಾಂಡ್ಯ ಔಟಾಗದೆ 35ರನ್, ಕೃನಾಲ್ ಪಾಂಡ್ಯ 14ರನ್ ಮತ್ತು ಜೆ.ಪಿ.ಡುಮಿನಿ ಔಟಾಗದೆ 13ರನ್ ಗಳಿಸಿದರು.
ಕೆಕೆಆರ್ ತಂಡದ ಸುನೀಲ್ ನರೇನ್ ಮತ್ತು ಆ್ಯಂಡ್ರೆ ರಸೆಲ್ ತಲಾ 2 ವಿಕೆಟ್ ಹಂಚಿಕೊಂಡರು.
,,,,,
Next Story





