ಕೇಂದ್ರದ ಇಂತಹ ನಿಲುವನ್ನು ಹಿಂದೆಂದೂ ಕಂಡಿರಲಿಲ್ಲ
ತನ್ನ ಪದೋನ್ನತಿ ವಿವಾದ ಕುರಿತು ನ್ಯಾ.ಜೋಸೆಫ್

ಹೊಸದಿಲ್ಲಿ,ಮೇ 6: ಸರ್ವೋಚ್ಚ ನ್ಯಾಯಾಲಯಕ್ಕೆ ತನ್ನ ಪದೋನ್ನತಿಯನ್ನು ಸರಕಾರವು ತಡೆ ಹಿಡಿದಿರುವ ಹಿನ್ನೆಲೆಯಲ್ಲಿ ರವಿವಾರ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಉತ್ತರಾಖಂಡ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಕೆ.ಎಂ.ಜೋಸೆಫ್ ಅವರು,ಕೇಂದ್ರವು ಈ ಹಿಂದೆಂದೂ ಇಂತಹ ನಿಲುವು ತಳೆದಿದ್ದ ಪೂರ್ವ ನಿದರ್ಶನವಿಲ್ಲ. ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಕಳುಹಿಸಿದ್ದ ಹೆಸರುಗಳನ್ನು ಮರುಪರಿಶೀಲಿಸುವಂತೆ ಸೂಚಿಸಿರುವ ವಿದ್ಯಮಾನ ಈ ಹಿಂದೆಂದೂ ನಡೆದಿಲ್ಲ ಎಂದು ಹೇಳಿದರು.
ಕೊಲಿಜಿಯಂ ಸಭೆಯನ್ನು ಕರೆದಿದೆ,ಹೀಗಾಗಿ ಅದು ನಡೆಯುವ ಮೊದಲು ತಾನು ಏನನ್ನಾದರೂ ಹೇಳುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯದ ಐವರು ಅತ್ಯಂತ ಹಿರಿಯ ನ್ಯಾಯಾಧೀಶ ರನ್ನೊಳಗೊಂಡಿರುವ ಕೊಲಿಜಿಯಂ ನ್ಯಾ.ಜೋಸೆಫ್ ಅವರ ಪದೋನ್ನತಿಗಾಗಿ ದೃಢ ನಿಲುವು ಹೊಂದಿದೆ. ಅದು ಎರಡನೇ ಬಾರಿಯೂ ನ್ಯಾ.ಜೋಸೆಫ್ ಅವರ ಹೆಸರನ್ನೇ ಶಿಫಾರಸು ಮಾಡಿದರೆ ನಿಯಮಗಳನುಸಾರ ಸರಕಾರವು ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಮೂಲಗಳು ಈ ಹಿಂದೆ ಹೇಳಿದ್ದವು.
Next Story





