ತಲೆಮರೆಸಿಕೊಂಡ ಉದ್ಯಮಿ ಈಶ್ವರನ್ ರನ್ನು ಭೇಟಿಯಾದ ಸಿದ್ದರಾಮಯ್ಯ: ಬಿಜೆಪಿ ಆರೋಪ

ಬೆಂಗಳೂರು, ಮೇ 6: 2009ರಲ್ಲಿ ತಲೆ ಮರೆಸಿಕೊಂಡಿದ್ದ ಉದ್ಯಮಿ ವಿಜಯ್ ಈಶ್ವರನ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ರವಿವಾರ ಮಲ್ಲೇಶ್ವರಂನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೂಡಿಕೆದಾರರ ಸಮಾವೇಶಕ್ಕೆ ಉದ್ಯಮಿಗಳನ್ನು ಆಹ್ವಾನಿಸುವ ನೆಪದಲ್ಲಿ ಚೀನಾದಲ್ಲಿ ವಿಜಯ್ ಈಶ್ವರನ್ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆಂಬ ಭಾವಚಿತ್ರಗಳನ್ನು ಬಿಡುಗಡೆ ಮಾಡಿದರು.
ವಿಜಯ್ ಈಶ್ವರನ್ ಕೈಯಲ್ಲಿ ಗಿಫ್ಟ್ ಪ್ಯಾಕೆಟ್ ಕೂಡ ಇದ್ದು, ಅದನ್ನು ಸಿಎಂಗೆ ನೀಡಿರುವ ಬಗ್ಗೆ ಸಂಶಯವಿದೆ. 70 ಲಕ್ಷ ರೂ.ಮೊತ್ತದ ‘ಹ್ಯೂಬ್ಲೋಟ್’ ಕೈಗಡಿಯಾರ ಇದೆಯೇ ಎಂದು ಪ್ರಶ್ನಿಸಿದ ಅವರು, ವಿಜಯ್ ಈಶ್ವರನ್ ವಿರುದ್ಧ ದೇಶಾದ್ಯಂತ ನೂರಕ್ಕೂ ಹೆಚ್ಚು ಎಫ್‌ಐಆರ್ ದಾಖಲಾಗಿವೆ ಎಂದು ಹೇಳಿದರು.
Next Story





