ನೀತಿ ಸಂಹಿತೆ ಉಲ್ಲಂಘನೆ: ಸೊರಕೆ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು

ವಿನಯ ಕುಮಾರ್ ಸೊರಕೆ
ಬ್ರಹ್ಮಾವರ, ಮೇ 6: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ವಿನಯ ಕುಮಾರ್ ಸೊರಕೆ ಸೇರಿದಂತೆ ಮೂವರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 5ರಂದು ಸಂಜೆ ಬ್ರಹ್ಮಾವರ -ಬಾರ್ಕೂರು ಮುಖ್ಯ ರಸ್ತೆಯ ಹಂದಾಡಿ ಶ್ರೀದುರ್ಗಾ ಸಭಾಭವನದ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಕಾಪು ವಿಧಾನಸಭೆಯ ಚುನಾವಣೆಗೆ ಸಂಬಂಧಿಸಿದ ಪರಿಕರವನ್ನು ಅನುಮತಿ ಅಥವಾ ದಾಖಲಾತಿಗಳು ಇಲ್ಲದೇ ಸಾಗಿಸುತ್ತಿರುವುದು ಕಂಡು ಬಂದಿತ್ತೆನ್ನಲಾಗಿದೆ. ಕಾರನ್ನು ಚಲಾಯಿಸುತ್ತಿದ್ದ ಪೆರ್ಣಂಕಿಲದ ಗುರುದಾಸ ಹೆಬ್ಬಾರ್, ಕಾರಿನ ಮಾಲಕಿ ಕೀರ್ತನ ಗುರುದಾಸ ಹಾಗೂ ಕಾಪು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಚುನವಣಾ ನೀತಿ ಸಂಹಿತಿಯನ್ನು ಉಲ್ಲಂಘಿಸಿ ಈ ಕೃತ್ಯ ಎಸಗಿರುವುದಾಗಿ ಪ್ಲೆಯ್ಯಿಂಗ್ ಸ್ಕ್ವಾಡ್ ಅಧಿಕಾರಿ ಜಯರಾಜ ಆಚಾರ್ಯ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
Next Story





