ಬೆಂಗಳೂರು ವಿ.ವಿ ಕಾನೂನು ಮಹಾ ವಿದ್ಯಾಲಯ: ಬಿಎ, ಎಲ್‌ಎಲ್‌ಬಿ ಕೋರ್ಸ್‌ಗೆ ಅರ್ಜಿ ಆಹ್ವಾನ
ಬೆಂಗಳೂರು, ಮೇ 6: ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಮಹಾ ವಿದ್ಯಾಲಯದಿಂದ 2018-19ನೆ ಶೈಕ್ಷಣಿಕ ಸಾಲಿನ ಐದು ವರ್ಷದ ಬಿಎ, ಎಲ್‌ಎಲ್‌ಬಿ ಪದವಿಯ ಮೊದಲ ಸೆಮಿಸ್ಟರ್ ಕೋರ್ಸ್‌ನ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಕನಿಷ್ಠ ಶೇ.40 ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಕನಿಷ್ಠ ಶೇ.45 ರಷ್ಟು ಅಂಕಗಳನ್ನು ಪಡೆದಿರಬೇಕು. ಗರಿಷ್ಠ ವಯೋಮಿತಿ 20 ವರ್ಷಗಳು (ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ 22 ವರ್ಷ) ಮೀರಿರಬಾರದು.
ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಮೇ 31ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಹಾಗೂ ಇನ್ನಿತರೆ ಮಾಹಿತಿಯನ್ನು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ www. bangalore university.ac.in ನಲ್ಲಿ ಅಥವಾ www.ulcbangalore.comನಲ್ಲಿ ಲಭ್ಯವಿರುತ್ತದೆ.
ಆನ್‌ಲೈನ್ ಮೂಲಕ ಭರ್ತಿ ಮಾಡಿದ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಂಡು ಸಂಬಂಧಪಟ್ಟ ದೃಢೀಕೃತ ದಾಖಲೆಗಳ ಸಮೇತ ಜೂನ್ 1ರೊಳಗೆ ಪ್ರಾಂಶುಪಾಲರು, ವಿಶ್ವ ವಿದ್ಯಾಲಯದ ಕಾನೂನು ಕಾಲೇಜು, ಜ್ಞಾನಭಾರತಿ ಆವರಣ, ಬೆಂಗಳೂರು-560 056 ಇವರಿಗೆ ಸಲ್ಲಿಸಬೇಕು.
ಅರ್ಜಿ ಶುಲ್ಕ: ಸಾಮಾನ್ಯ ಹಾಗೂ ಪೇಮೆಂಟ್ ಕೆಟಗಿರಿ ಸೀಟು ಎರಡೂ ವರ್ಗಕ್ಕೆ ಸೇರಿಸಿ ಸಾಮಾನ್ಯ ವರ್ಗಕ್ಕೆ 850 ರೂ.ಗಳು ಹಾಗೂ ಎಸ್ಸಿ-ಎಸ್ಟಿ ಮತ್ತು ಪ್ರವರ್ಗ-1ಕ್ಕೆ 550ರೂ.ಗಳು ನಿಗದಿಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ-080-2296 1172, 2296 1173, 2296 1040ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ಕೋರಿದೆ.







