ಯನೆಪೋಯ ಆಸ್ಪತ್ರೆಯಲ್ಲಿ ಇಂಜೀನಿಯಾ 1.5 ಟೆಸ್ಲಾ ಎಂಆರ್‌ಐ ಕಾರ್ಯಾರಂಭ

ಮಂಗಳೂರು, ಮೇ 6: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಫಿಲಿಫ್ಸ್ ಇಂಜೀನಿಯಾ 1.5 ಟೆಸ್ಲಾ ಎಂಆರ್‌ಐ ಮೆಶಿನ್ ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಯನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರವಿವಾರ ಉದ್ಘಾಟನೆಗೊಂಡಿತು.
ಯನಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಸಿ.ಪಿ.ಹಬೀಬ್ ರಹ್ಮಾನ್ ನೂತನ ಯಂತ್ರವನ್ನು ಉದ್ಘಾಟಿಸಿದರು. ಯನೆಪೋಯ ವಿವಿಯ ಕುಲಪತಿ ಯನೆಪೋಯ ಅಬ್ದುಲ್ಲ ಕುಂಞಿ, ಯನೆಪೋಯ ಸಮೂಹ ಸಂಸ್ಥೆಯ ಚೇರ್‌ಮನ್ ವೈ. ಮುಹಮ್ಮದ್ ಕುಂಞಿ, ಎಸ್.ಎಂ.ರಶೀದ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಯನೆಪೋಯ ಅಬ್ದುಲ್ಲ ಕುಂಞಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಯೆನೆಪೋಯ ಸಂಸ್ಥೆ ತನ್ನದೇ ಕೊಡುಗೆಯನ್ನು ನೀಡಿದ್ದು, ಇದೀಗ ಆಸ್ಪತ್ರೆಯಲ್ಲಿ ಫಿಲ್‌ಸಿ ಎಂಜೀನಿಯಾ 1.5 ಟೆಸ್ಲಾ ಎಂಆರ್‌ಐ ಮೆಶಿನ್ ಸ್ಥಾಪಿಸುವ ಮೂಲಕ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಚೆನ್ನೈಯ ಅಪೊಲೊ ಸ್ಪೆಶಾಲಿಟಿ ಆಸ್ಪತ್ರೆಯ ರೇಡಿಯಾಲಜಿಯ ಹಿರಿಯ ಸಲಹೆಗಾರ ಡಾ.ರವಿಕಾಂತ್ ಬಾಲಾಜಿ ಅವರು ನ್ಯೂರೋ ಆ್ಯಂಡ್ ಹೆಡ್ ಆ್ಯಂಡ್ ನೆಕ್ ಇಮೇಜಿಂಗ್ ಬಗ್ಗೆ ಹಾಗೂ ಯೆನೇಪೊಯ ವೈದ್ಯಕೀಯ ಆಸ್ಪತ್ರೆಯ ರೇಡಿಯೋಡಯಾಗ್ನಸಿಸ್ ವಿಭಾಗದ ಮುಖ್ಯಸ್ಥ ಡಾ. ದೇವದಾಸ್ ಆಚಾರ್ಯ ಅವರು ಬಿಯೋಂಡ್ ರುಟೀನ್ ಇಮೇಜಿಂಗ್-ಎಂಆರ್‌ಐ ವಿದ್ ಪ್ರಿಸಿಸನ್ ಆ್ಯಂಡ್ ಪ್ಯಾಸನ್ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಇನ್‌ಲ್ಯಾಂಡ್ ಬಿಲ್ಡರ್ಸ್‌ನ ಮಾಲಕ ಸಿರಾಜ್ ಅಹ್ಮದ್, ಇಬ್ರಾಹೀಂ ಕೋಡಿಜಾಲ್, ವೈ. ಅಬ್ದುಲ್ಲ ಜಾವೇದ್, ಯನೆಪೋಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ತಾಹೀರ್ ಮೊದಲಾದವರು ಉಪಸ್ಥಿತರಿದ್ದರು.
ಯನೆಪೋಯದ ಎಚ್‌ಆರ್ ಶರ್ಮಿಳಾ ಸಂತೋಷ್ ವಂದಿಸಿದರು. ಲವೀಟಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಎನ್‌ಎಬಿಎಚ್ ಮಾನ್ಯತೆ ಸಿಗಲು ಕಾರಣಕರ್ತರಾದ ಆಸ್ಪತ್ರೆಯ ವಿಶ್ವೇಶ್ವರಯ್ಯ ರೆಡ್ಡಿ ಸೇರಿದಂತೆ ಸಿಬ್ಬಂದಿಗಳನ್ನು ಅಭಿನಂದಿಸುವುದರೊಂದಿಗೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆ ನಡೆಯಿತು.
ಫಿಲಿಫ್ಸ್ ಇಂಜೀನಿಯಾ 1.5 ಟೆಸ್ಲಾ ಎಂಆರ್‌ಐ ಮೆಶಿನ್ ಸುಧಾರಿತ ತಂತ್ರಜ್ಞಾನ ಹೊಂದಿದೆ. ನೆದರ್‌ಲ್ಯಾಂಡ್‌ನಿಂದ ತರಿಸಲಾದ ಈ ಯಂತ್ರ ಸುಮಾರು 8 ಕೋಟಿ ವೆಚ್ಚದ್ದಾಗಿದೆ. ರೋಗಿ ಪರೀಕ್ಷೆ ಸಂದರ್ಭ ಭಯ ರಹಿತ ವಾತಾವರಣದಿಂದ ಇರಬಹುದು. 70 ಸೆಂಟಿ ಮೀಟರ್ ಗಾತ್ರದ ವೈಡ್ ಬೋರ್, ವಿಶಾಲವಾದ ಟೇಬಲ್ ಮತ್ತು ಏಂಬಿಯಂಟ್ ಲೈಟ್ ರಿಂಗ್ ರೋಗಿಗೆ ಆರಾಮವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ. ಡಿಜಿಟಲ್ ಟೆಕ್ನಾಲಜಿಯಲ್ಲಿ ಕಡಿಮೆ ಸಮಯದಲ್ಲಿ ವಿವರ ನೀಡುತ್ತದೆ. ರೋಗಿ ಮೆಶಿನ್ ಒಳಗೆ ಮಲಗಿರುವಾಗ ಆಯ್ಕೆಯ ವೀಡಿಯೊ ನೋಡಿಕೊಂಡು ಆರಾಮವಾಗಿ ಮಲಗಿಕೊಂಡಿರಬಹುದು.







