ಪ್ರಧಾನಿ ಮೋದಿ ಮಹದಾಯಿ ವಿವಾದ ಬಗೆಹರಿಸುವ ವಿಶ್ವಾಸವಿದೆ: ಯಡಿಯೂರಪ್ಪ

ದಾವಣಗೆರೆ,ಮೇ.06: ಪ್ರಧಾನಿ ಮೋದಿ ಮಹದಾಯಿ ವಿವಾದ ಬಗೆಹರಿಸುವ ವಿಶ್ವಾಸವಿದ್ದು, ಈ ಬಗ್ಗೆ ಯಾವುದೇ ಅನುಮಾನವೂ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ಪ್ರಚಾರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿವಾದವನ್ನು ಪ್ರಧಾನಿ ನರೇಂದ್ರ ಮೋದಿ ಆದಷ್ಟು ಬೇಗ ಪರಿಹರಿಸಲಿದ್ದಾರೆ. ಮೋದಿ ಒಮ್ಮೆ ಹೇಳಿದರೆ ಮುಗಿಯಿತು. ಪ್ರಧಾನಿ ಹೇಳಿದಂತೆಯೇ ಸಮಸ್ಯೆಯನ್ನು ಖಂಡಿತವಾಗಿಯೂ ಪರಿಹರಿಸುತ್ತೇವೆ. ಯಾರೋ ಮಾಡಿದ ಟೀಕೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಒಮ್ಮೆ ಮೋದಿ ಹೇಳಿದ್ದಾರೆಂದರೆ ಅದು ಆಗುವುದು ನಿಶ್ಚಿತ ಎಂದರು.
ಆದಷ್ಟು ಬೇಗನೆ ಮಹದಾಯಿ ವಿವಾಹ ಸುಖಾಂತ್ಯ ಕಾಣಲಿದ್ದು, ಉತ್ತರ ಕರ್ನಾಟಕದ ಜನರ ಬಹು ದಶಕದ ಬೇಡಿಕೆಗೆ ಸ್ಪಂದಿಸಿ, ಜನರಿಗೆ ನೀರೊದಗಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮಾಡಲಿದೆ ಎಂಬು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
Next Story





