ಜೆ.ಆರ್.ಲೋಬೊರಿಂದ ಬಿರುಸಿನ ಮತ ಯಾಚನೆ

ಮಂಗಳೂರು, ಮೇ 6: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೊ ಅವರು ಶನಿವಾರ ಹೊಯಿಗೆ ಬಝಾರ್, ಸುಭಾಶ್ ನಗರ, ಮರೋಳಿ ಪರಿಸರದಲ್ಲಿ ಬಿರುಸಿನ ಪ್ರಚಾರ ಪ್ರಚಾರ ಕೈಗೊಂಡರು. 300ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜೆ.ಆರ್.ಲೋಬೊ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 20 ವರ್ಷಗಳಿಂದ ಸಾಧ್ಯವಾಗದ ರಸ್ತೆ ಅಭಿವೃದ್ಧಿಗಳು, ಚರಂಡಿ, ಫುಟ್ಪಾತ್ ನಿರ್ಮಾಣ ಕಾಮಗಾರಿಗಳು ಪ್ರಸಕ್ತ ಆರಂಭವಾಗಿದೆ. ವಾಹನಗಳ ಸಂಖ್ಯೆಗಳು ಹೆಚ್ಚಳವಾದಂತೆ, ಮುಖ್ಯ ರಸ್ತೆಗಳ ಅಗಲೀಕರಣ ಕಾರ್ಯ ಅನೇಕ ಕಡೆ ಆಗಿವೆ. ನಂತೂರು ವೃತ್ತದಿಂದ ನಂದಿಗುಡ್ಡೆ ಕೋಟಿ ಚೆನ್ನಯ್ಯ ವೃತ್ತದ ವರೆಗೆ ರಸ್ತೆ ಅಗಲೀಕರಣ, ರಸ್ತೆ ವಿಭಜಕ, ಹೊಸ ವಿದ್ಯುತ್ ಲೈಟು, ಫುಟ್ಪಾತ್ ನಿರ್ಮಾಣ ಕಾರ್ಯ ವೇಗವಾಗಿ ಆಗುತ್ತಿದೆ. ಇದೊಂದು ಮಂಗಳೂರಿನ ಮಾದರಿ ರಸ್ತೆ ಎಂದು ಹೇಳಬಹುದು. ಅನೇಕ ಯೋಜನೆಗಳು ವಿವಿಧ ಹಂತದಲ್ಲಿದ್ದು ಅದು ಮುಂದಿನ ದಿನಗಳಲ್ಲಿ ಅನುಷ್ಠಾಕ್ಕೆ ಬರಲಿದೆ. ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರಲ್ಲಿ ಸಂಶಯವಿಲ್ಲಾ ಎಂದರು.
ಕಾಂಗ್ರೆಸ್ ಮುಖಂಡರಾದ ಅಬ್ದುಸ್ಸಲಾಮ್, ವಿಶ್ವಾಸ್ ಕುಮಾರ್ ದಾಸ್, ಕಾರ್ಪೊರೇಟರ್ ಅಬ್ದುಲ್ಲತೀಫ್ ಕಂದಕ್, ಕವಿತಾ ವಾಸು, ಕೇಶವ ಮರೋಳಿ, ಸ್ಟೀಫನ್ ಮರೋಳಿ, ಪಕ್ಷದ ಪ್ರಮುಖರಾದ ಸದಾಶಿವ ಅಮೀನ್, ಸುರೇಶ್ ಶೆಟ್ಟಿ, ಟಿ.ಕೆ.ಸುಧೀರ್ ಅರುಣ್ ಕುವೆಲ್ಲೊ, ಲೋಕೇಶ್ ಹೆಗ್ಡೆ, ಗಂಗಾಧರ ಪೂಜಾರಿ, ನೆಲ್ಸನ್ ಮೊಂತೆರೊ, ಹೊನ್ನಯ್ಯ, ಸುಧಾಕರ ಶೆಣೈ ರಮಾನಂದ ಪೂಜಾರಿ, ಬಿ.ಎಮ್. ಭಾರತಿ, ದುರ್ಗಾಪ್ರಸಾದ್, ದೇವೇಂದ್ರ, ಲೆಸ್ಲಿ ಡಿಕ್ರೂಸ್, ರಾಕೇಶ್, ಜಾಯ್‌ಕ್ರಿಸ್ತ್, ಗಾಡ್ವಿನ್, ರಾಹುಲ್ ಮುಂತಾದವರು ಉಪಸ್ಥಿತರಿದ್ದರು.







