ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಜಯ

ರಾಹುಲ್ ಔಟಾಗದೆ 84ರನ್(54ಎ, 7ಬೌ.3ಸಿ),
ಇಂದೋರ್, ಮೇ 6: ಐಪಿಎಲ್ ಟ್ವೆಂಟಿ-20 ಟೂರ್ನಿಯ 38ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 6 ವಿಕೆಟ್ಗಳ ಜಯ ಗಳಿಸಿದೆ.
ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಆರಂಭಿಕ ದಾಂಡಿಗ ಹಾಗೂ ವಿಕೆಟ್ ಕೀಪರ್ ಲೋಕೇಶ್ ರಾಹುಲ್ ಏಕಾಂಗಿ ಹೋರಾಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಗೆಲುವಿಗೆ 153 ರನ್ ಗಳಿಸಬೇಕಿದ್ದ ಪಂಜಾಬ್ ತಂಡ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟದಲ್ಲಿ 155 ರನ್ ಗಳಿಸಿತು. ಈ ಗೆಲುವಿನೊಂದಿಗೆ ಪಂಜಾಬ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಇಟ್ಟಿದೆ. ರಾಹುಲ್ ಔಟಾಗದೆ 84ರನ್(54ಎ, 7ಬೌ.3ಸಿ), ಕರುಣ್ ನಾಯರ್ 31ರನ್, ಕ್ರಿಸ್ ಗೇಲ್ 8ರನ್, ಮಾಯಾಂಕ್ ಅಗರವಾಲ್ 2ರನ್, ಅಕ್ಷರ್ ಪಟೇಲ್ 4ರನ್ ಮತ್ತು ಮಾರ್ಕುಸ್ ಸ್ಟೋನಿಸ್ ಔಟಾಗದೆ 23 ರನ್ ಗಳಿಸಿದರು.
ರಾಜಸ್ಥಾನ ರಾಯಲ್ಸ್ ತಂಡ ವಿಕೆಟ್ ಕೀಪರ್ ಜೋಸ್ ಬಟ್ಲರ್ ದಾಖಲಿಸಿದ ಅರ್ಧಶತಕದ ಸಹಾಯದಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 152 ರನ್ ಗಳಿಸಿತ್ತು.
ಟಾಸ್ ಜಯಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತ್ತು.
ಜೋಸ್ ಬಟ್ಲರ್ 51 ರನ್(39ಎ, 7ಬೌ), ಆರ್ಚಿ ಶಾರ್ಟ್ 2ರನ್, ನಾಯಕ ಅಜಿಂಕ್ಯ ರಹಾನೆ 5ರನ್, ಸಂಜು ಸ್ಯಾಮ್ಸನ್ 28ರನ್, ಬೆನ್ ಸ್ಟೋಕ್ಸ್ 12ರನ್, ರಾಹುಲ್ ತ್ರಿಪಾಠಿ 11ರನ್, ಜೋಫ್ರಾ ಆರ್ಚರ್ 0, ಕೃಷ್ಣಪ್ಪ ಗೌತಮ್ 5ರನ್, ಶ್ರೇಯಸ್ ಗೋಪಾಲ್ 24ರನ್, ಜೈದೇವ್ ಉನಾದ್ಕಟ್ ಔಟಾಗದೆ 6ರನ್ ಗಳಿಸಿದರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮುಜೀಬ್ ರ್ರಹ್ಮಾನ್ 27ಕ್ಕೆ 3, ಅಂಡ್ರೋ ಟೈ 24ಕ್ಕೆ 2, ರವಿಚಂದ್ರನ್ ಅಶ್ವಿನ್, ಅಂಕಿತ್ ರಜಪೂತ್, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು.
,,,,,,,,,,







